ಹೊಸ ಬಸ್ ನಿಲ್ದಾಣಕ್ಕೆ ಚನ್ನಮ್ಮಳ ಹೆಸರು ನಾಮಕರಣ ಮಾಡಬೇಕು : ರೋಹಿಣಿ ಪಾಟೀಲ
ಮುಂದಿನ ಚನ್ನಮ್ಮ ಪುಣ್ಯಸ್ಮರಣೆ ಒಳಗಾಗಿ ಬೆಳಗಾವಿ ಹೊಸ ಬಸ್ ನಿಲ್ದಾನಕ್ಕೆ ಚನ್ನಮ್ಮ ಹೆಸರು ನಾಮಕರಣ ಮಾಡಬೇಕು ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾದ್ಯಮದ ಮೂಲಕ ಮನವಿ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾನಕ್ಕೆ ಚನ್ನಮ್ಮಳ ಹೆಸರು ನಾಮಕರಣ ಮಾಡಬೇಕು ಎಂದು ಮೊದಲಿಂದ ಮನವಿ ಮಾಡುತ್ತಾ ಬಂದಿದ್ದು, ಅದನ್ನು ಮಾಡಲಾಗಿಲ್ಲ,ಬೆಳಗಾವಿಯಲ್ಲಿ ಹೊಸದಾಗಿ ನಿರ್ಮಾಣವಾದ ಕೇಂದ್ರ ಬಸ್ ನಿಲ್ದಾನಕ್ಕೆ ಮುಂದಿನ ಚನ್ನಮ್ಮಳ ಪುಣ್ಯಸ್ಮರಣೆ ಒಳಗಾಗಿ ಕಿತ್ತೂರು ಚನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಅವರು ತಿಳಿಸಿದರು.
ರಾಷ್ಟ್ರ ಮಾತೆ ರಾಣಿ ಕಿತ್ತೂರು ಚನ್ನಮ್ಮ ಪುಣ್ಯಸ್ಮರಣೆ ನಿಮಿತ್ತ ಚನ್ನಮ್ಮಳ ಜನ್ಮಸ್ಥಳ *ಕಾಕತಿಯಿಂದ ಐಕ್ಯಸ್ಥಳದಿಂದ ಬೈಲಹೊಂಗಲಕ್ಕೆ* ತೆರಳಲಿದ್ದು ಚೆನ್ನಮ್ಮನ ಜ್ಯೋತಿ ಇಂದು ಇಂದು ಕಾಕತಿ ಯಿಂದ ನಗರದ ಕಿತ್ತೂರ ಚನ್ನಮ್ಮ ವೃತ್ತಕ್ಕೆ ಬಂದು ಚನ್ನಮ್ಮಳ ಪುತ್ತಳಿಗೆ ಮಾಲಾರ್ಪನೆ ಮಾಡುವ ಮೂಲಕ ಚನ್ನಮ್ಮ ಜ್ಯೋತಿಯು ಬೈಲಹೊಂಗಲ ನತ್ತ ಸಾಗಿತು.
*ಚನ್ನಮ್ಮ ಜ್ಯೋತಿ ಮಾರ್ಗ*
ಕಾಕತಿಯಿಂದ ಮುಂಜಾನೆ 10.30 ಹೋರಟ ಜ್ಯೋತಿಯು ಬೆಳಗಾವಿ ಚನ್ನಮ್ಮ ವೃತ್ತಕ್ಕೆ 11.30 ಗಂಟೆಗೆ ತಲುಪಿ, ಚನ್ನಮ್ಮ ಪುತ್ತಳಿಗೆ ಮಾಲಾರ್ಪನೆ ಮಾಡುವ ಮೂಲಕ ಚನ್ನಮ್ಮನ ಕಿತ್ತೂರ ಕಡಿಗೆ ಜ್ಯೋತಿ ತೆರಲಿತು. ನಂತರ ರಾಯಣ್ಣ ಸಂಗೋಳ್ಳಿ, ಅಮಟುರ ಕೊನೆಯದಾಗಿ ಚನ್ನಮ್ಮಳ ಐಕ್ಯ ಸ್ಥಳ ಬೈಲಹೊಂಗಲನಲ್ಲಿ ವೇಧಿಕೆ ಕಾರ್ಯಕ್ರಮವನ್ನು ವೀರ ರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮೀತಿ ಬೈಲಹೊಂಗಲ ವತಿಯಿಂದ ನೆರವೆರಲಿದೆ..
ಎಪ್.ಎಸ್.ಸಿದ್ದನಗೌಡ, ಶ್ರೀಶೈಲ್ ಬೋಳನ್ನವರ, ಮುರಗೇಪ್ಪ ಗುಂಡ್ಲುರ್, ರಾಜು ಕಿವಡಸಣ್ಣನ್ನವರ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.