ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ
ಅಥಣಿ: ಮುಂದಿನ ದಿನಮಾನಗಳಲ್ಲಿ “ಹರಗ oವಗ… 12 ಅಣೆ, ಸಾಲಿ ಮಾಸ್ತರಿಗ ನಾಲ್ಕ ಅಣೆ ಪಗಾರ”ಆಗುವುದರಲ್ಲಿ ಸಂದೇಹವಿಲ್ಲ ಲಕ್ಷ್ಮಣ ಸವದಿ ಅವರು ಅಭಿಪ್ರಾಯಪಟ್ಟರು. ನಂದಗಾವ್ದಲ್ಲಿ ನೂತನ ಶಾಲಾ ಕಟ್ಟಡ ಹಾಗೂ ಉನ್ನತಿಕರಿಸಿದ ನೂತನ ಪ್ರೌಢಶಾಲಾ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ 244 ಪ್ರೌಢಶಾಲೆಗಳಲ್ಲಿ 9 ನಮ್ಮ ಅಥಣಿ ಮತಕ್ಷೇತ್ರಕ್ಕೆ ತರುವುದಷ್ಟೇ ಅಲ್ಲದೆ 11 ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅನುವು ಮಾಡಿ ಕೊಟ್ಟಿದೆ ಎಂದರು. ದೇಶದಲ್ಲಿ ತ್ರಿಬಾಷಾ ವ್ಯವಸ್ಥೆ ಇರುವುದರಿಂದ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು.
“ಬುದ್ಧಿ ಹೇಳದ ತಂದೆ, ವಿದ್ಯೆ ಕೊಡದ ಗುರು, ಬಿದ್ದಿರಲು ಬಂದು ನೋಡದ ತಾಯಿ ಇದ್ದರೇನು ಫಲ “ಸರ್ವಜ್ಞನ ವಚನದೊಂದಿಗೆ ಶಿಕ್ಷಕರು ಮತ್ತು ಪಾಲಕರನ್ನು ತಮ್ಮ ದಾಟಿಯಲ್ಲಿಯೇ ಕುಟಕಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವಸಿದ್ಧ ಶ್ರೀ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡುತ್ತಾ–“ಒಂದು ಗುಡಿ ಕಟ್ಟುವ ಬದಲು, ಒಂದು ಗಿಡ ನೆಡಿ”ಎಂದು ಶ್ರೀ ಸಿದ್ದೇಶ್ವರಪ್ಪಗಳು ಹೇಳುತ್ತಿದ್ದರೆಂದರು. ಯಾಕಂದ್ರೆ ಗುಡಿ ದೇವರ ಮೂರ್ತಿ ಗೆ ಮಾತ್ರ ಆಶ್ರಯ ನೀಡಿದರೆ, ಗಿಡ ನೆರಳು ಅರಸಿ ಬಂದವರಿಗೆಲ್ಲ ನೆರಳು ನೀಡುತ್ತದೆ ಎಂದರು. ಅಧ್ಯಕ್ಷರುಗಳು ಶಾಂತಿನಾಥ್ ಮಾದೇಶ್ವರ ದಿಲೀಪ್ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು