ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ
ಗೋಕಾಕ : ನಗರದ ಬಸವೇಶ್ವರ ವೃತ್ತದಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ಅವಹೇಳನ ಮಾಡಿದ್ದನ್ನು ಖಂಡಿಸಿ ರಮೇಶ ಕತ್ತಿ ಹೇಳಿಕೆ ವಿರೋದಿಸಿ ಗೋಕಾಕ ತಾಲೂಕಾ ವಾಲ್ಮಿಕಿ ಸಮುದಾಯದವರಿಂದ ಭಾರಿ ಪ್ರತಿಭಟನೆ ಮಾಡಿದರು.
ಸೋಮವಾರ ( ಅ.20) ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರಗೆ ಬೆಂಕಿ ಹಚ್ಚಿ ವಾಲ್ಮೀಕಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ವಾಲ್ಮೀಕಿ ಸಮುದಾಯದವರು ರಮೇಶ ಕತ್ತಿ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವರ ಆಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯ ಸುರೇಶ ಸನದಿಯವರು ರಾಜಕೀಯದಲ್ಲಿ ಸೊಲು ಗೆಲುವು ಇದ್ದೆ ಇರುತ್ತದೆ,ನೀವು ಕತ್ತಿಯಾಗಿದ್ದಿತಿ ಹಾಗೆ ಇರಬೇಕು ಇಲ್ಲದಿದ್ದರೆ ನಿಮ್ಮನ್ನು ಕತ್ತೆಯಾಗಿ ಮಾಡುವುದು ವಾಲ್ಮೀಕಿ ಸಮುದಾಯದವರಿಗೆ ಗೊತ್ತಿದೆ ಎಂದರು. ಇನ್ಮುಂದೆ ಎಚ್ಚರದಿಂದರಲು ಎಚ್ಚರಿಕೆ ನೀಡಿದರು.
ಅಷ್ಡೆ ಅಲ್ಲದೆ ಸ್ಥಳಿಯ ಸನ್ನಿಂಗವ್ವಾ ನವಣಿ ಇವರು ನಿನ್ನ ಹಾಗೆ ನಮ್ಮ ಮನೆಯಲ್ಲಿರುವ ಬೆಕ್ಕುಗಳಿಗೆ ಮಿಸೆ ಇವೆ,ಇನ್ನೊಮ್ಮೆ ಗೋಕಾಕಕ್ಕೆ ಕಾಲಿಟ್ಟರೆ ಕಟ್ಟಿ ಹಾಕಿ ಚಪ್ಪಲಿನಿಂದ ಹೊಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ವರೆಗೆ ಪಾದಯಾತ್ರೆ ಮಾಡುತ್ತಾ ರಮೇಶ ಕತ್ತಿಗೆ ದಿಕ್ಕಾರ ಕೂಗಿ ತಕ್ಷಣ ಬಂದಿಸುವಂತೆ ತಹಶಿಲ್ದಾರರ ಮುಖಾಂತರ ಗೃಹ ಸಚಿವರಿಗೆ ಮನವಿ ನೀಡಿದರು.
ಈ ಪ್ರತಿಭಟನೆಯಲ್ಲಿ ಬಸವರಾಜ ಸಾಯನ್ನವರ, ಸುರೇಶ ನಾಯಕ, ಈಶ್ವರ ಗುಡಜ, ಭೀಮಸಿ ಭರಮನ್ನವರ, ಸುರೇಶ ಕುಮರೇಶಿ ಸೇರಿದಂತೆ ನೂರಾರು ಜನ ಪ್ರತಿಭಟನೆ ಬಾಗಿಯಾಗಿದ್ದರು.