ಸಿ.ಎಸ್.ಸಿ ಮೂಲಕ ಆಧಾರ್ ಸೇವೆಗಳು ಸರಳ ರೀತಿಯಲ್ಲಿ ಜನರಿಗೆ ಲಭ್ಯ ; ಗಜಾನನ ನಾಯ್ಕ
ಬೆಂಗಳೂರು: ಇಡೀ ಕರ್ನಾಟಕ ರಾಜ್ಯದಲ್ಲಿ ಸಿಎಸಸಿ ಮುಖಾಂತರ ಜನರಿಗೆ ತ್ವರಿತಗತಿಯಲ್ಲಿ ಆಧಾರ ಸೇವೆಗಳು ಸಿಗುತ್ತಿವೆ ಎಂದು ಸಿಎಸಸಿ ರಾಜ್ಯ ಸಹ ವ್ಯವಸ್ಥಾಪಕರಾದ ಗಜಾನನ ನಾಯ್ಕ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಆಧಾರ ತರಭೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ನಾವು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಆಧಾರ್ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದೇವೆ ಆರ್.ಡಿ.ಪಿ.ಆರ್., ಎಎಸಕೆ, ವಿಎಲ್ಇಗಳು ಸೇರಿ ಜನರಿಗೆ ಹೊರೆಯಾಗದಂತೆ ಸಿಎಸಸಿ ಸೇವೆಗಳು ಸಿಗುತ್ತಿವೆ ಎಂದು ಹೇಳಿದರು.
ಆಧಾರ ಡಾಕ್ಯುಮೆಂಟ್ ಅಪ್‌ಲೋಡ್ ಮತ್ತು ದೋಷ ಮತ್ತು ದಂಡದ ಹೊಸ ಅಭಿವೃದ್ಧಿ ಮತ್ತು ಆಧಾರ್‌ನಲ್ಲಿನ ಬದಲಾವಣೆಗಳ ಕುರಿತು ವಿವರವಾದ ತರಬೇತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಿಎಸಸಿ ರಾಜ್ಯ ವ್ಯವಸ್ಥಾಪಕರಾದ ವಿಭಾಸಕುಮಾರ್, ಯುಐಡಿಎಐ, ಪ್ರಾದೇಶಿಕ ಕಛೇರಿ ಬೆಂಗಳೂರಿನ ಅನುಪ್ ಕೆ, ಪವನ್ ಕುಮಾರ್ ಪಹ್ವಾ, ರಾಗವೇಂದ್ರ ಎಸ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ವಿಎಲ್ಇಗಳು ಭಾಗವಹಿಸಿದ್ದರು.