ಹತ್ತು ವರ್ಷದಿಂದ ಮನವಿ ನೀಡಿದರು ಗಾಂಜಾ ಮತ್ತು ಪನ್ನಿ ಮಾದಕವಸ್ತು ತಡೆಗಟ್ಟುತ್ತಿಲ್ಲ ಎನ್ನುತ್ತಿರುವ ಜಯ ಕರ್ನಾಟಕ ಸಂಘಟನೆ
ಬೆಳಗಾವಿ :ನಗರದಲ್ಲಿ ಇತ್ತಿಚಿಗೆ ಗಾಂಜಾ ಮತ್ತು ಪನ್ನಿ ಚಟುವಟಿಕೆಗಳು ಬಹಳಷ್ಟು ನಡೆಯುತ್ತಿದ್ದು, ಇದರಿಂದ ದೇಶದ ಭವಿಷ್ಯ ಹಾಳಾಗುತ್ತಿದೆ. ಹಲವಾರು ಶಾಲೆ, ಕಾಲೇಜು ಮತ್ತು ಕೋಚಿಂಗ ಸೆಂಟರಗಳ ಕಡೆ ಮುಚ್ಚಿ ಮುಚ್ಚಿ ಗಾಂಜಾ ಮತ್ತು ಪತಿಯನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ, ಮತ್ತು ಜೀವನ ಎರಡು ಹಾಳಾಗುತ್ತಿದೆ ಎಂದು ಇಂದು ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜಯ ರಜಪೂತ್ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಸುಮಾರು ಹತ್ತು ವರ್ಷಗಳಿಂದ ನಗರ ಪೊಲೀಸ್ ಆಯುಕ್ತರಿಗೆ, ಎಸ್.ಪಿ ಯವರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದೇವೆ. ಮನವಿ ನೀಡಿದ ಒಂದು ತಿಂಗಳವರೆಗೆ ಗಾಂಜಾ ಮಾರಟವನ್ನು ನೀಲ್ಲಿಸಿ ನಂತರ ಅದು ಯಥಾ ಸ್ಥಿತಿಯಲ್ಲಿ ಮುಂದುವರೆಯುತ್ತಿದೆ. ಈ ವಿಚಾರವಾಗಿ ಜಿಲ್ಲಾಧಿಳಿತ ಗಮನ ಹರಿಹಿಸಿ ಶಾಲೆ ಕಾಲೇಜು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಿ ಸಂಪೂರ್ಣ ಮಾರಟವನ್ನು ತಡೆಗಟ್ಟುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಮಾರ್ಚ ಮತ್ತು ಎಪ್ರಿಲ್ ತಿಂಗಳಿನಲ್ಲಿ ಹತ್ತನೆ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳ ಜರಗುತ್ತಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳ ಗಮನ ವಿಧ್ಯಾಭ್ಯಾಸದ ಕಡೆ ಇರದೇ ಗಾಂಜಾ ಮತ್ತು ಪನ್ನಿ ಕೆಟ್ಟ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಇದರಿಂದ ಮುಂಬರುವ ವಿದ್ಯಾರ್ಥಿಗಳ ಜೀವನ ಹಾಳಗದಂತೆ ತಾವುಗಳು ಜಾಂಗಾ ಮತ್ತು ಪನ್ನಿ ಮಾರಾಟ ಮಾಡುವವರ ವಿರುದ್ದ ತಾವುಗಳು ಹಾಗೂ ಪೊಲೀಸ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.