ಹಣ ಕೊಟ್ಟು ಜನ ಕರಿಸುವುದು ಕಾಂಗ್ರೆಸ ಪರಂಪರೆ:ಬೊಮ್ಮಾಯಿ
ಸಿದ್ದರಾಮಯ್ಯನವರಿಗೆ ಚಾಲೆಂಜ್ ಹಾಕಿದ ಬೊಮ್ಮಾಯಿ
ಬೆಳಗಾವಿ : ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ಇನ್ನು ಹಲುವು ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸನ ಪ್ರಜಾಧ್ವನಿ ಯಾತ್ರೆ ಮಾಡುವ ಬಸ್ಸನಲ್ಲಿ ಸಿದ್ದರಾಮಯ್ಯನವರು 500 ರೂಪಾಯಿ ಜನ ತರಿಸಿ ಎಂಬ ವಿಡಿಯೋ ರಾಜ್ಯದಂತ ವೈರಲ ಆಗಿದ್ದು ಕರ್ನಾಟಕ ಸಿ ಎಂ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸದು ಹಣಕೊಟ್ಟು ಜನ ಸೇರಿಸುವ ಪರಂಪರೆ ಆಗಿದ್ದು ಇವಾಗ ಹೊರಗೆ ಬಿದ್ದಿದೆ ಎಂದು ಹೇಳಿದ್ದಾರೆ, ರಾಜಹಂಸ ಗಡ ಉದ್ದಾರಕ್ಕೆ ಕಾಂಗ್ರೆಸ್ ಹಣ ಕೊಟ್ಟಿದೆ ಆದರೆ ಸಿಎಂ ಬಂದು ಉದ್ಘಾಟನೆ ಮಾಡುತಿದ್ದರೆ ಅವರಿಗೆ ನಾಚಿಕೆ ಆಗ್ಬೇಕು ಎಂದು ಸಿದ್ದು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ,ಸಿದ್ದರಾಮಯ್ಯ ಸರಕಾರ ರಾಜಹಂಸ ಗಡ್ ಕೋಟೆ ಅಭಿವೃದ್ಧಿಗೆ ಒಂದು ನಯಾ ಪೈಸಾ ಅನುದಾನ ಕೊಟ್ಟಿದ್ರೆ ಅವರನ್ನ ಮತ್ತೊಮ್ಮೆ ಕರಿಸಿ ಕೋಟೆ ಉದ್ಘಾಟನೆ ಮಾಡಿಸ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.
ಕೋಟೆ ಅಭಿವೃದ್ಧಿಗೆ ಹಣ ಕೊಟ್ಟಿದ್ದು ಬಿಜೆಪಿನೇ ಮತ್ತು ಲೋಕಾರ್ಪಣೆ ಮಾಡೋದು ಬಿಜೆಪಿನೆ ಎಂದು ಹೇಳಿದ್ದಾರೆ,ಕೋಟೆ ಸೇರಿದ್ದು ಸರ್ಕಾರಕ್ಕೆ ಸ್ಕೀಮ್ ಸರಕಾರದ್ದು ,ಹಣ ಬಿಡುಗಡೆ ಮಾಡಿದ್ದು ಸರ್ಕಾರ ಆದ್ದರಿಂದ ಅನಾವರಣ ಸರ್ಕಾರದಿಂದಲೆ ಆಗುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.