*ಗ್ರಾಮೀಣ ಶಾಸಕಿ ಸೋಲುವ ಭಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದ ನಾಗೇಶ ಮನ್ನೊಳ್ಕರ*
*ಬೆಳಗಾವಿ* ಗುರುವಾರ ನಗರದ ಸಮೀಪ ಇರುವ ರಾಜಹಂಸಘಡ ಕೋಟೆಯಲ್ಲಿ ಬಿಜೆಪಿ ಸರ್ಕಾರದ ವತಿಯಿಂದ ಉದ್ಘಾಟನೆ ಆಗುತ್ತಿರುವ, ಕೋಟೆಯ ಅಭಿವೃದ್ದಿ, ಹಾಗೂ ಶಿವಾಜಿ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರರಿಗೆ ಈ ಮೇಲಿನಂತೆ ಹೇಳಿದ್ದಾರೆ..
ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು,
ನಾಗೇಶ ಮನ್ನೊಳಕರ ಅವರ ಬಗ್ಗೆ ಮಾತನಾಡುತ್ತಾ ಕಳೆದ 2018 ರ ಚುನಾವಣೆಯಲ್ಲಿ ಇದೇ ವ್ಯಕ್ತಿ ನನ್ನ ಬಳಿ ಬಂದು,,
40 ಲಕ್ಷ ನನಗೆ ನೀಡಿದರೆ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ, ನಮ್ಮ ಕಡೆಯ ಎಲ್ಲಾ ಮತಗಳನ್ನು ತಮಗೆ ನೀಡುತ್ತೇನೆ ಎಂಬ ಡೀಲ್ ತಂದಿದ್ದರು ಎಂದು ಆರೋಪ ಮಾಡಿದ್ದರು..
ಅದೇ ವಿಷಯವಾಗಿ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಮಾದ್ಯಮಕ್ಕೆ ಶಾಸಕಿಯವರು ಬರಿ ಸುಳ್ಳು ಹೇಳುತ್ತಿದ್ದಾರೆ, ಯಾವ ದೇವರ ಮುಂದೆ ಬಂದು ಪ್ರಮಾಣ ಮಾಡಲು ನಾನು ರೆಡಿ, ಅವರು ಕೂಡಾ ಬಂದು ಪ್ರಮಾಣ ಮಾಡಲಿ, ಸೋಲಿನ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ, ಅವರ ಹಿಂಬಾಲಕರ ಮೇಲೆಯೇ ಅವರಿಗೆ ನಂಬಿಕೆ ಇಲ್ಲ,
ಮತಿ ಇಲ್ಲದವರಂತೆ ಮಾತನಾಡುತ್ತಿದ್ದಾರೆ, ಮುಂದಿನ ದಿನದಲ್ಲಿ ಜನರು ಸುಮ್ಮನಿದ್ದರೂ ಆ ದೇವರು ಅವರ ಈ ಸುಳ್ಳು ವಿಚಾರಕ್ಕೆ ಬುದ್ದಿ ಕಲಿಸುತ್ತಾನೆ ಎಂದರು..