ಸುಮಾರು 800 ಎಕರೇ ಭೂಮಿಯನ್ನು ಸಿದ್ದರಾಮಯ್ಯ ಅವರು ಡಿ ನೋಟಿಪೈ ಮಾಡಿದ್ದಾರೆ
ಪಕ್ಷದ ಶಾಸಕರ ಚಿರಂಜಿವಿ ಮೇಲೆ ಲೋಕಾಯುಕ್ತ ದಾಳಿ ಆಗಿದೆ ಎಂದು ಪ್ರಾರಂಭದಲ್ಲಿ ಕಾಂಗ್ರೆಸ್ ನವರು ಖುಷಿ ಪಟ್ಟರು. ಕಾಂಗ್ರೆಸ್ ನವರು ತಮ್ಮ ಮೇಲಿನ ಕೇಸ್ ಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಲೋಕಾಯುಕ್ತವನ್ನು ಕ್ಲೋಸ್ ಮಾಡಿ ಎ.ಸಿ.ಬಿ ಯನ್ನು ತಂದರು ಎಂದು ನ್ಯಾಯಮೂರ್ತಿ ಕೆಂಪಣ್ಣ ತನ್ನ ತೀರ್ಪಿನಲ್ಲಿ ಸ್ಪಷ್ಟನೇ ನೀಡಿದ್ದನ್ನು ಮುಖ್ಯಮಂತ್ರಿಗಳು ಸದನದಲ್ಲಿ ಓದಿ ಹೇಳಿದ್ದಾರೆ ಎಂದು ಸಿ.ಸಿ.ಪಾಟೀಲ್ ಹೇಳಿದರು.
ಕಾಂಗ್ರೆಸ್ ನವರ ಮೇಲೆ ಲೋಕಾಯುಕ್ತದಲ್ಲಿ 50 ಕೇಸ್ ಪೆಂಡಿಂಗ್ ಇವೆ. ಬಿಜೆಪಿ ಮೇಲೆ ಒಂದ ಕೇಸ್ ಇದೆ ಎಂದು ಖುಷಿ ಪಟ್ಟಿದ್ದಾರೆ. ಖುಷಿ ಪಡುವ ಅವಶ್ತಕತೆ ಇಲ್ಲ, ಗಾಜಿನ ಮನೆಯಲ್ಲಿ ಅವರೂ ಕುಂತಿದ್ದಾರೆ ಆದರೇ ಲೋಕಾಯುಕ್ತಕ್ಕೆ ಬಲ ತುಂಬಿದವರು ನಾವು ಎಂದರು.
ನ್ಯಾಯಮೂರ್ತಿ ಕೆಂಪಣ್ಣ ಸ್ಪಷ್ಟವಾಗಿ ಕೇಳಿದ್ದಾರೆ ಸುಮಾರು 800 ಎಕರೇ ಭೂಮಿಯನ್ನು ಸಿದ್ದರಾಮಯ್ಯ ಅವರು ಡಿ ನೋಟಿಪೈ ಮಾಡಿದ್ದಾರೆ ಎಂದು. ಇದನ್ನು ಯಾಕೆ ಕಾಂಗ್ರೆಸ್ ನವರು ಸದನಕ್ಕೆ ಮಂಡಿಸಲಿಲ್ಲ. ಮತ್ತೆ ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.
ಅವರೇ ನೇಮಕ ಮಾಡಿದ ನ್ಯಾಯಮೂರ್ತಿ ಕೆಂಗಣ್ಣ ಅವರು ಹೇಳಿದ ಹಾಗೇ 800 ಎಕರೇ ವಿಚಾರವನ್ನು ಸದನದಲ್ಲಿ ಸಂಪೂರ್ಣ ಮುಚ್ಚಿ ಇಟ್ಟಿದ್ದಾರೆ. ಇದು ಬರತ್ತೆ ಅಂತ ಸದನದಲ್ಲಿ ಇರೋದಿಲ್ಲ, ನಂತರ ನಾವು ಸದನದಲ್ಲಿ ಇಲ್ಲದ ವೇಳೆ ಚರ್ಚೆ ಮಾಡಿದ್ದಾಋ ಎಂದು ಅವರೇ ಹೇಳುತ್ತಾರೆ.
ಮೂರು ಅಧಿವೇಶನಲ್ಲಿ 40% ಕಮಿಶನ್ ಬಗ್ಗೆ ಮಾತನಾಡುತ್ತಾರೆ, ಸದನದಲ್ಲಿ ಒಂದು ದಿನವಾದರೂ ಸಿರಿಯಸ್ ಆಗಿ ಚರ್ಚೆ ಮಾಡಿದ್ದಾರಾ, ಬೆಳಗಾವಿ ಅಧಿವೇಶದಿಂದ 40% ಅನ್ನುತ್ತಿದ್ದಾರೆ. ದಾಖಲೆಗಳ ಮೂಲಕ ಇವರ ಮೇಲೆ ಇದೆ ಎಂದು ಆರೋಪ ಮಾಡಬೇಕಲ್ಲ ಸುಳ್ಳು ಹೇಳಿತ್ತಾರೆ ಎಂದು ಸಿ.ಸಿ. ಪಾಟೀಲ್.