ಮಹಿಳೆಯರ ವಿವಿಧ ಬೇಡಿಕೆ ಇಡೇರಿಸುವಂತೆ ಡಿಸಿಯವರಿಗೆ ಮನವಿ ಸಲ್ಲಿಸಿದ ಮಹಿಳಾ ಪರಿಷತ ಸದಸ್ಯರು
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಳಗಾವಿ ಜಿಲ್ಲಾ ಮಹಿಳಾ ಪರಿಷತವತಿಯಿಂದ ಇಂದು ಡಿಸಿಯವರಿಗೆ ಭೇಟಿಯಾಗಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಬೆಲೆ ಏರಿಕೆ ಹೆಚ್ಚಾಗಿದ್ದು ಮನೆ ನಡೆಸುವುದು ಕಷ್ಟದಾಯಕವಾಗಿದೆ ಆದ್ದರಿಂದ ಸರ್ಕಾರ ಬೆಲೆಯೇರಿಕೆ ಕುರಿತು ಚಿಂತಿಸಿ ಸರಿಯಾದ ವ್ಯವಸ್ಥೆ ಮಾಡಲು ಕೋರಿದ್ದಾರೆ.
ಬಿಸಿಲು ಹೆಚ್ಚಾಗಿದ್ದು ಪ್ರತಿಯೊಬ್ಬರು ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಬೆಳಗಾವಿಯಲ್ಲಿ ನಿರಿನ ವ್ಯವಸ್ಥೆ ಸರಿಮಾಡಿ ಎಂದು ಡಿಸಿಯವರ ಮೂಲಕ ಸರಕಾರದ ಮುಂದೆ ಕೇಳಿಕೊಂಡಿದ್ದಾರೆ.