ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು : ಆರ್.ಪಿ.ಐ ಪಕ್ಷದ ಕಾರ್ಯಾಧ್ಯಕ್ಷ ಎಮ್.ವೆಂಕಟಸ್ವಾಮಿ
ಬೆಳಗಾವಿ : ಜಿಲ್ಲೆಯ 11 ಚುನಾವಣಾ ಕ್ಷೇತ್ರದಲ್ಲಿ ಕಣಕ್ಕೆ ಆರ್.ಪಿ.ಐ ಪಕ್ಷದ ಅಭ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಎಮ್ ವೆಂಕಟಸ್ವಾಮಿ ಹೇಳಿದರು.
ಮಾಜಿ ನಗರ ಸೇವಕರು ಹಾಗೂ ಸಮಾಜ ಸೇವಕರಾದ ಶಿವ ಲಿಂಬಾಜಿ ಚೌಗಲೆ ಅವರನ್ನು ಆರ್.ಪಿ.ಐ ಪಕ್ಷಕ್ಕೆ
ಅಧಿಕೃತವಾಗಿ ಬರಮಾಡಿಕೊಂಡು ಇಂದು ನಗರದ ನ್ಯೂ ಸರ್ಕ್ಯೂಟ್ ಹೌಸ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 11 ಚುನಾವಣಾ ಕಣದಲ್ಲಿ ನಮ್ಮ ಪಕ್ಷದ ಅಭ್ಯಾರ್ಥಿಗಳು ಸ್ಪರ್ಧಿಸುತ್ತಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಸ್ಪರ್ಧಿಸುವ ಅಭ್ಯಾರ್ಥಿಗಳ ಪಟ್ಟಿಯನ್ನು ಘೋಷಿಸಲಾಗುವುದು ಎಂದರು.
ಜಾತ್ಯಾತೀತವಾಗಿ ನಮ್ಮ ಪಕ್ಷವು ಸರ್ವಜನಾಂಗದ ಸಮಸ್ಯೆ ಗಳಿಗೆ ಒತ್ತು ನೀಡಿ ಸಕಾಲಕ್ಕೆ ಸ್ಪಂದಿಸುವ ಪಕ್ಷವಾಗಿದೆ.
ಈಶಾನ್ಯ ರಾಷ್ಟ್ರದಲ್ಲಿ ಈಗಾಗಲೇ 2 ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲುವು ಸಾದಿಸಿದ್ದು,ಅದೇ ತರಹ ರಾಜ್ಯದಲ್ಲಿಯೋ ಗೆಲ್ಲುತ್ತದೆ. ಮೂಲಭೂತ ವಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ವಿರೋಧ ಇದೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮ ಪಕ್ಷದ ಆದ್ಯತೆ ಆಗಿದೆ, ಶೋಷಿತ ವರ್ಗಗಳ ಜನಾಂಗವನ್ನು ಕಡೆಗಣಿಸಿದ ಪಕ್ಷವಾಗಿದೆ ಹಾಗೂ ರಾಜಕೀಯ ಪಕ್ಷದಲ್ಲಿ ಒಳ್ಳೆಯ ನಡವಳಿಕೆಗಳು ಕಂಡುಬರುತ್ತಿವೆ ಮತ್ತು ಈಗಾಗಲೇ ನಿಪ್ಪಾಣಿ ತಾಲ್ಲೂಕಿನಿಂದ ಪಕ್ಷಕ್ಕೆ ದೊಡ್ಡ ಬಲ ಸೆರ್ಪಡೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ನಾವು ಕಾಂಗ್ರೆಸ್, ಜೆಡಿಎಸ್ ವಿರೋದಿ ಪಕ್ಷ ನಮ್ಮದು. ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲೇ ಬಾರದು ಅದು ಭ್ರಷ್ಟ ಸರ್ಕಾರ, ಪಕ್ಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಸಂಚಾಲಕರಾದ ಎ. ಬಿ. ಹೊಸಮನಿ, ಜಿಲ್ಲಾ ಮುಖಂಡರಾದ ದಿಲ್ಶಾದ ತಹಶೀಲ್ದಾರ,ಶೇಖ, ಭಾರತಿ,ದಿವಾನ್ ಮತ್ತು ದಿಕ್ಷೀತ,ಹನುಮಂತ ಹೊಸಮನಿ,ಶೇಖ್ ಸೇರಿದಂತೆ ಮತ್ತಿತರರು ಹಾಜರಿದ್ದರು.
***