ನಮ್ಮ ಮತಗಟ್ಟೆ ಕಡೆ ಜಾತಾಗೆ ಚಾಲನೆ ನೀಡಿದ ಶೃತಿ ಮಳ್ಳಪ್ಪಗೌಡರ
ಗದಗ. ಮತದಾನ ಮಾಡಿಸುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ಯುವಕರ ಜವಾಬ್ದಾರಿ ಹೆಚ್ಚುದ್ದು ಜಾತ ಮುಗಿದ ಕೂಡಲೇ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮಗಳಲ್ಲಿ ಮತದಾರರ ಮತದಾನದ ಕುರಿತು ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನು ಮತದಾನ ಮಾಡಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಚುನಾವಣೆ ಮುಗಿಯುವ ತನಕ ಮತದಾನ ಮಾಡಿಸುವ ಕೆಲಸ ಮಾಡಿ ಎಂದು ಮುಂಡರಗಿ ತಾಲೂಕಿನಲ್ಲಿ ನಮ್ಮ ನಡೆ ಮತದಗಟ್ಟೆ ಕಡೆ ಜಾತಾಗೆ ಚಾಲನೆ ನೀಡಿ ಮಾತನಾಡಿದ ತಾಲೂಕ ದಂಡಾಧಿಕಾರಿಗಳಾದ ಶ್ರುತಿ ಮಳ್ಳಪ್ಪಗೌಡರ
ಭಾರತ ಚುನಾವಣೆ ಆಯೋಗ ಹಾಗೂ ಕರ್ನಾಟಕ ಚುನಾವಣೆ ಆಯೋಗ ಜಿಲ್ಲಾ ಆಡಳಿತ ತಾಲೂಕ ಆಡಳಿತ ಸಂಯುಕ್ತ ಆಶ್ರಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೂಡಿಕೊಂಡು ಮುಂಡರಗಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ವೇದಘೋಷದೊಂದಿಗೆ ಮೆಟ್ರಿಕ್ ನಂತರ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತಹಶೀಲ್ದಾರ್ ಕಾರ್ಯಾಲಯದಿಂದ ಜಾತ ಮಾಡಿದರು ಕೊಪ್ಪಳ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿ ಮತದಾನದ ಕುರಿತು ಜಾಗೃತಿ ಮೂಡಿಸಿದರು ನಂತರ ತಾಲೂಕ ಪಂಚಾಯಿತಿಗೆ ತೆರಳಿದರು ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾಕ್ಟರ್ ಬಸವರಾಜ ಬಳ್ಳಾರಿ. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಾರ್ಕಿ . ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯುವರಾಜ್ ಹನುಗುಂದ ಜಾತದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಮ್ಮ ನಡೆ ಮತಗಟ್ಟೆ ಕಡೆ. ಪ್ರತಿಯೊಬ್ಬರೂ ಮತದಾನ ಮಾಡಿ. ನಮ್ಮ ಮತ ನಮ್ಮ ಪವರ್. ಮುಂತಾದ ಘೋಷಣೆಗಳೊಂದಿಗೆ ಜಾತ ಮಾಡಿದರು