ವಿದ್ಯಾರ್ಥಿಗಳಿಂದ ಅಣಕು ಸಂಸತ್ತು ಪ್ರದರ್ಶನ
ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಬ್ರೈಟ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಅಣಕು ಸಂಸತ್ತು ಕಾರ್ಯಕ್ರಮವನ್ನು ಪ್ರದರ್ಶನ ಮಾಡಲಾಯಿತು.
ಈ ಅಣಕು ಸಂಸತ್ತಿನಲ್ಲಿ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಆಂಗ್ಲ ಭಾಷೆ ಅವಶ್ಯಕತೆ ಇದೆಯೋ?ಅಥವಾ ಇಲ್ಲವೋ? ಎಂಬ ವಿಷಯದ ಕುರಿತು ಅಣಕು ಸಂಸತ್ತಿನಲ್ಲಿ ಚರ್ಚೆಯಾಯಿತು.
ಆಡಳಿತ ಪಕ್ಷದಲ್ಲಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳು ತಮ್ಮ ವಿಚಾರವನ್ನು ಮಂಡಿಸಿದರು, ವಿರೋಧ ಪಕ್ಷದಲ್ಲಿದ್ದ ವಿದ್ಯಾರ್ಥಿಗಳು ಈ ಮಸೂದೆಯನ್ನು ವಿರೋಧಿಸಿದರು. ಕೊನೆಗೆ ಸಭಾಪತಿಗಳು ಮಸೂದೆಯನ್ನು ಮತಕ್ಕೆ ಹಾಕಿದರು. ಈ ಮಸೂದೆಯ ಪರವಾಗಿದ್ದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ ಸಭಾಪತಿಗಳು ಸಂಸತ್ತಿನಲ್ಲಿ ಮಸೂದೆಯನ್ನು ಪಾಸು ಮಾಡಿದರು.
ವಿದ್ಯಾರ್ಥಿಗಳ ಉತ್ಸಾಹ ಮಾತನಾಡುವ ಶೈಲಿ ಭಾಷೆಯ ನಿರರ್ಗಳತೆಯನ್ನು ವೀಕ್ಷಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಕಾಂತ್ ಕುಲ್ಗುಡೆಯವರು ಹರ್ಷ ವ್ಯಕ್ತಪಡಿಸಿದರು ಹಾಗೂ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ರಾಜಕೀಯ ಜ್ಞಾನ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀಮತಿ ಮೀನಲ್ ಶಶಿಕಾಂತ್ ಕುಲ್ಗುಡೆ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಧರ್ಮರ ಉಪಸ್ಥಿತರಿದ್ದರು. ಈ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಸಲ್ಮಾ ಪಟೇಲ್ ಮಾರ್ಗದರ್ಶನ ನೀಡಿದರು.
ಕಂಪ್ಯೂಟರ್ ಶಿಕ್ಷಕಿ ಕುಮಾರಿ ಲಲಿತಾ ಚೌಗುಲೆ ಹಾಗೂ ಕನ್ನಡ ಶಿಕ್ಷಕ ಆನಂದ್ ಸಾನೇ ಮತ್ತು ಶ್ರೀ ಕೇದಾರಿ ರವರು ತಾಂತ್ರಿಕ ಸಹಾಯ ಮಾಡಿದರು. ಹಾಗೂ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾರಣಿಭೂತರಾದರು.