ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ಶ್ರೀ ದೇವರ ಗುಂಡುಗುರ್ತಿ ಆರಾಧ್ಯದೈವ ಬಂಡಾರದ ಒಡೆಯ ಶ್ರೀ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದ್ದು ಮಾ.21 ರಂದು ವಿಶೇಷ ಪೂಜೆಗಳು ಹಾಗೂ ನೂತನವಾಗಿ ನಿರ್ಮಾಣಗೊಂಡಿರುವ ಪುಸ್ಕರಣಿಯ ಉದ್ಘಾಟನೆ ನಡೆಯಿತು.
ದಿನಾಂಕ 22/03/2023ರಂದು ಬೆಳ್ಳಿಗೆ 4:30ಕ್ಕೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಪಲ್ಲಕಿ ಉತ್ಸವ, ಪೂಜ್ಯ ಶ್ರೀ ನಿಜಲಿಂಗ ಮಹಾಸ್ವಾಮಿಗಳಿಂದ ಕಾಲಮಾನ ಹೇಳಿಕೆ(ಕಾರ್ಣಿಕ ), ಸರಪಳಿ ಪವಾಡ ಜರುಗುವುದು. ಮೈಲಾರ ಲಿಂಗೇಶ್ವರ ದರ್ಶನ ಪಡೆಯಲು ಕರ್ನಾಟಕದದ್ಯಂತ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಹಾಗೂ ಮಹಾರಾಷ್ಟ್ರದಿಂದ ಭಕ್ತಾದಿಗಳು ಬಂದು ಮೈಲಾರಲಿಂಗೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.
ನಂತರ ಭಕ್ತಾದಿಗಳು ಶ್ರೀ ಮೈಲಾರಲಿಂಗೇಶ್ವರನಿಗೆ ಜ್ಯೋತಿ, ಜವಳ, ಉರುಳು ಸೇವೆ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ.. ಈ ಸಂದರ್ಭವನ್ನು ಕಣ್ತುಂಬಿಕೊಳ್ಳುವುದೆ ಭಕ್ತರ ಪಾಲಿನ ಸ್ವರ್ಗವೆ ಆಗಿರುತ್ತದೆ ಸುಕ್ಷೇತ್ರ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಂಡಾರಾದ ಒಡೆಯ ಶ್ರೀ ಶ್ರೀ ಮೈಲಾರ ಲಿಂಗೇಶ್ವರ ಕೃಪೆಗೆ ಪಾತ್ರರಾಗಿ ಎಂದು ದೇವಸ್ಥಾನ ಸಮಿತಿಯ ಸದಸ್ಯರು ಭಕ್ತರಲ್ಲಿ ಮನವಿ ಮಾಡಿದರು.