ಯಾವುದೇ ಪಕ್ಷವಾಗಲಿ ಬುದ್ದಿವಂತ ಜನರ ಸಲಹೆ ತಗೆದುಕೊಂಡು ತೀರ್ಮಾನ ಮಾಡಬೇಕು ಇಷ್ಟು ತಿಳುವಳಿಕೆ ಡಿಕೆ ಶಿವಕುಮಾರ ಗೆ ಇರಬೇಕಿತ್ತು.
ಬೆಳಗಾವಿ : ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುತ್ತಾರೆ, ಕಾಂಗ್ರೆಸ್ ನವರು ನಾವು ಗೆಲ್ಲುತ್ತೇವೆ ಎಂದು ಕಣ್ಣ ತೆರೆದು ಇಟ್ಟು ಕನಸ್ಸು ನೋಡುತ್ತಾರೆ, ನಾವು ಏನು ಮಾಡಾಕ ಆಗಲ್ಲ, ನಾವು ಮಲ್ಕೊಂಡು ಕನಸ್ಸು ನೋಡುತ್ತೇವೆ ಎಂದು ಸಂಜಯ ಪಾಟೀಲ ಹೇಳಿದರು.
ಬಿಜೆಪಿ ಅಭ್ಯರ್ಥಿಗಳು ಲಿಸ್ಟ್ ರೇಡಿ ಮಾಡೋದು ನನ್ನ ಕೈಯಲ್ಲಿ ಇದ್ದರೇ ಇಗಲೇ ಬಿಡುಗಡೆ ಮಾಡುತ್ತಿದ್ದೆ, ಆದರೇ ಅದು ನಮ್ಮ ಪಕ್ಷದ ವಕ್ತಾರರ ಹತ್ತಿರ ಇದೆ ಅವರು ಯಾವಾಗ ಬಿಡುಗಡೆ ಮಾಡುತ್ತಾರೆ ನೋಡಬೇಕು. ಬಿಜೆಪಿ ಟಿಕೆಟನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಾರೆ ನಮ್ಮ ಪಕ್ಷದಲ್ಲು ಯಾರು ಕಚ್ಚಾ ಕಾರ್ಯಕರ್ತರಿಲ್ಲ ಎಲ್ಲ ಪಕ್ಕ ಕಾರ್ಯಕರ್ತರಿದ್ದಾರೆ ಎಂದರು.
ಯಾವುದೇ ಪಕ್ಷವಾಗಲಿ ಬುದ್ದಿವಂತ ಜನರ ಸಲಹೆ ತಗೆದುಕೊಂಡು ತೀರ್ಮಾನ ಮಾಡಬೇಕು ಇಷ್ಟು ತಿಳುವಳಿಕೆ ಡಿಕೆ ಶಿವಕುಮಾರ ಗೆ ಇರಬೇಕಿತ್ತು.
ಪಂಚಮಸಾಲಿ ಸಮಾಜಕ್ಕೆ ಖುಷಿ ಪಡಿಸುವುದಾಗಿದ್ದರೆ ಬೇಗನೇ ತಿರ್ಮಾನ ತೆಗೆದುಕೊಳ್ಳಬಹುದಿತ್ತು, ಆದರೇ ಅವರಿಗೆ ಖಾಯಂ ಆಗಿ ಮೀಸಲಾತಿ ಉಳಿಬೇಕು, ಮುಂದೆ ಅವರಿಗೆ ಹೋರಾಟ ಮಾಡವ ಪರಿಸ್ಥಿತಿ ಬರಬಾರದು ಎನ್ನುವ ದೃಷ್ಠಿಯಿಂದ ಮುಖ್ಯಮಂತ್ರಿ ಬೋಮ್ಮಾಯಿ ಅವರು ತಿರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ನವರು ಬಾಯಿ ತೆಗೆದು ಕುಂತಿದ್ದರು, ಬಿಜೆಪಿಯವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೋಡುವುದಿಲ್ಲ, ಮುಂದೆ ಚುನಾವಣೆಯಲ್ಲಿ ನಾವೇ ಅಧಿಕಾರಿಕ್ಕೆ ಬರುತ್ತೆವೆ ಎಂದು, ಆದರೇ ಬಿಜೆಪಿ ಸರ್ಕಾರ ಮೀಸಲಾತಿ ನೀಡಿದೆ ಇದರಿಂದ ಕಾಂಗ್ರೆಸ್ ತಮ್ಮ ಡಿಪೋಜಿಟ್ ಹಣವನ್ನು ಕಳೆದುಕೊಳ್ಳುತ್ತೆ ಎಂದು ಅವರು ಹೇಳಿದರು.
ಮೀಸಲಾತಿ ಬಗ್ಗೆ ಐತಿಹಾಸಿಕ ಘೋಷಣೆಯನ್ನು ಬೊಮ್ಮಾಯಿ ತೆಗೆದುಕೊಂಡಿದ್ದಾರೆ ಎಂದು ಎಂ ಬಿ ಜಿರಲಿ ಹೇಳಿದ್ದಾರೆ,ಡಾ ಬಿ ಆರ್ ಅಂಬೇಡ್ಕರವರನ್ನು ನೆನೆದು ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ ಜಿರಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ,ಲಂಬಾಣಿ ಮತ್ತು ಇತರ ಜನಾಂಗಳಿಗೆ ಒಳಮೀಸಲಾತಿ ನಿರ್ಣಯ ಮಾಡಿದ್ದು ಬೊಮ್ಮಾಯಿ ಸರ್ಕಾರ ಎಂದು ಇಂದು ನಡೆದ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಜಿರಲಿ ಹೇಳಿದರು.