ಹುಟ್ಟುರಿನಿಂದ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಸಚಿವ ಶಂಕರಪಾಟೀಲ*
ಧಾರವಾಡ : ನವಲಗುಂದ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ತಮ್ಮ ಸ್ವಗ್ರಾಮವಾದ ಅಮರಗೊಳದಿಂದ ತಮ್ಮ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು
ಅಮರಗೊಳ ಗ್ರಾಮದ ಶ್ರೀ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು..ನಂತರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಜನರೊಂದಿಗೆ ಮಾತನಾಡಿದರು ನಂತರ ಹಲವಾರು ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು..
ಗ್ರಾಮದಲ್ಲಿ ಪ್ರತಿಜನರು ಮನೆಮಗನಂತೆ ಸ್ವಾಗತ ಕೋರಿ ಶುಭ ಹಾರೈಸಿದರು ದೇಶದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಜನಪರ ಕಾಳಜಿ ಇರುವ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಾಗಿ ಅಮರಗೊಳ ಗ್ರಾಮದ ಜನರು ಭರವಸೆ ನೀಡಿದರು…
ನಂತರ ಗ್ರಾಮದ ಸಿದ್ದಾರೂಡ ಸ್ವಾಮಿ ದೇವಸ್ಥಾನ,ಮಹಾದೇವರ ಮಠ, ಬೀರದೇವರ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಗ್ರಾಮದ ಬಸನಗೌಡ ಪಾಟೀಲ್, ರುದ್ರಪ್ಪ ಕಟ್ಟಿಕಾರ, ಈರಪ್ಪ ಕುಲಕರ್ಣಿ , ಮಹಾಂತಗೌಡ ಮೋನಿ, ಬಸವರಾಜ ಮುದಿಗೌಡ್ರ , ಮಹಾಂತಗೌಡ ಹೊಸಗೌಡ್ರ ಇನ್ನು ಪಕ್ಷದ ಪ್ರಮುಖ ನಾಯಕರು ಕಾರ್ಯಕರ್ತರು ಯುವಕರು ಮಹಿಳೆಯರು ಭಾಗಿಯಾಗಿದ್ದರು..
*ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ*