*ಚಿಕ್ಕನಗೌಡ್ರ ಗೆ ಪಕ್ಷೇತರ ಅಭ್ಯರ್ಥಿಗಳ ಬಲ: ಎಮ್ ಆರ್ ಕರಡಿ ಬೆಂಬಲ*
ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ 70 ಪಕ್ಷೇತರ ಅಭ್ಯರ್ಥಿ ಯಾದ ಮಹಮ್ಮದ ಹನೀಫ ರಾಜೇಸಾಬ ಕರಡಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದು ಮಾಜಿ ಶಾಸಕರಾದ ಎಸ್ ಐ ಚಿಕ್ಕನಗೌಡ್ರ ಪರವಾಗಿ ಚುನಾವಣೆ ನಡೆಸಲು ನಿರ್ಧಾರ ಮಾಡಿರುವದಾಗಿ ತಿಳಿಸಿದರು
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡಿಸಿ ಮಾತನಾಡಿದ ಎಮ್ ಆರ್ ಕರಡಿ ಈ ಹಿಂದೆ ನಡೆದ ಚುನಾವಣೆಯಲ್ಲಿ ನಮ್ಮ ಸಮಾಜ ಹಾಗು ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು .ಕುಸುಮಾವತಿ ಶಿವಳ್ಳಿ ಅವರು ಶಾಸಕರಾದ ನಂತರ ನಿರಂತರವಾಗಿ ನಮ್ಮ ಹಾಗು ಸಮಾಜದ ಬಗ್ಗೆ ನಿಶ್ಕಾಳಜಿ ತೋರಿಸುತ್ತಾ ಬಂದಿದ್ದಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಹ ಮರಿಚಿಕೆ ಆಗಿದೆ ಆದ ಕಾರಣ ನಾವು ಚಿಕ್ಕನಗೌಡ್ರ ಅವರಿಗೆ ಬೆಂಬಲಿಸಲು ನಿರ್ಧಾರ ಮಾಡಿದ್ದೆವೆ .
ಈ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾದ ಎಸ್ ಆಯ್ ಚಿಕ್ಕನಗೌಡ್ರ ಅವರು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದು ಯಡಿಯೂರಪ್ಪ ಅವರ ಆಪ್ತ ಸಂಭಂದಿಕರಾದ ಚಿಕ್ಕನಗೌಡ್ರ ಅವರಿಗೆ ಇಂದು ಅಲ್ಪಸಂಖ್ಯಾತ ನಾಯಕರ ಬೆಂಬಲ ಮತ್ತಷ್ಟು ಬಲತಂದಿದೆ
ಇನ್ನು ಕುಂದಗೋಳ ಕ್ಷೇತ್ರದಲ್ಲಿ ನಾನು ಪಕ್ಷೇತರ ಅಭ್ಯರ್ಥಿ ಆದ ಚಿಕ್ಕನಗೌಡ್ರ ಪರವಾಗಿ ಇಂದಿನಿಂದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಬೇಟೆ ಯಾಗಿ ಚಿಕ್ಕನಗೌಡ್ರ ಗೆಲವಿಗೆ ಶ್ರಮಿಸುವೆ ಅಂತ ತಿಳಿಸಿದರು .ಬಿಜೆಪಿಯ ಕೋಮು ದ್ವೇಷದ ರಾಜಕಾರಣ ಹಾಗು ಕಾಂಗ್ರೆಸ್ ನ ತಾತ್ಸಾರ ನೀತಿಯಿಂದ ಅಲ್ಪಸಂಖ್ಯಾತರ ಮತಗಳು ಈ ಭಾರಿ ಚಿಕ್ಕನಗೌಡ್ರ ಅವರಿಗೆ ಬೆಂಬಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಈ ಪತ್ರಿಕಾ ಗೊಷ್ಠಿಯಲ್ಲಿ ಅಲ್ಪಸಂಖ್ಯಾತ ನಾಯಕ ಸಮುದಾಯದ ನಾಯಕರು ಅಬ್ದುಲ್ ಸಾಬ ನಾಯ್ಕರ್ .ಮುಲ್ಲಾ ಶಿದ್ದಣ್ಣ ಹೊಳಿ . ಶೆಂಕರಗೌಡ್ರ .ಲಾಲಸಾಬ ಸುಂಕದ .ಬಿ ಎಚ್ ಬಂದಗಿ ಉಪಸ್ಥಿತ ಇದ್ದರು.