ಕಾಶಿನಾಥ್ ಇರಗಾರ್ ಅವರಿಗೆ ಸರ್ವಲೋಕಾ ಸೇವಾ ಪೌಂಡೇಶನ್ ವತಿಯಿಂದ ಸನ್ಮಾನ್
ಬೆಳಗಾವಿಯ ಕೋಟೆ ಕೆರೆಯಲ್ಲಿ ಶನಿವಾರ ಅಪರಿಚಿತ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದಾಗ, ಕರ್ತವ್ಯದಲ್ಲಿದ್ದ ಬೆಳಗಾವಿ ಸಂಚಾರಿ ಪೊಲೀಸ್ ಇಲಾಖೆಯ ಸಿಬ್ಬಂದಿ, ಕಾಶಿನಾಥ ಇರಗಾರ ಅವರು ತಮ್ಮ ಜೀವದ ಹಂಗು ತೊರೆದು ಕೆರೆಗೆ ದುಮುಖಿ ಆ ಮಹಿಳೆಯ ಪ್ರಾಣ ರಕ್ಷಣೆ ಮಾಡಿ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಅದೇ ರೀತಿ ನಗರದಲ್ಲಿನ ಜನಪರ ಸಮಾಜ ಸೇವೆ ಸಲ್ಲಿಸುತ್ತಿರುವ ಸರ್ವಲೋಕಸೇವಾ ಫೌಂಡೇಶನಲ್ಲು ಅನೇಕ ಜನಪರ ಹಾಗೂ ಸಮಾಜ ಸೇವೆಯನ್ನು ಬಾಹ್ಯ ಜೀವನಾಡಿಯಾಗಿ ಸೇವೆಗೈದಿರುವ ಕಾಶಿನಾಥ ಅವರ ಸಾಹಸಕ್ಕೆ ಇಂದು ಪೌಂಡೇಶನ್ ಅಧ್ಯಕ್ಷರಾದ ವೀರೇಶ್ ಹಿರೇಮಠ, ನೀಲಕಂಠ ಶಾಸ್ತ್ರೀಗಳು, ಸಿದ್ದಯ್ಯ ಹಿರೇಮಠ, ಸಂತೋಷ ದೇಶನೂರ, ರವಿಕಿರಣ್ ಹೆಗ್ಗೆರಿ ಸುಭಾಷ ಹಾದಿಮನಿ ಸರ್ವಲೋಕಸೇವಾ ಫೌಂಡೇಶನ್ ಸ್ವಯಂ ಸೇವಕರು ಗೌರವಿಸಿ ಸನ್ಮಾನಿಸದರು…..