ಹಲವಾರು ಮಹನೀಯರ ಬಲಿದಾನ ಫಲವಾಗಿ ಸ್ವತಂತ್ರ ದೊರೆತಿದೆ, ಅದನ್ನು ಕಾಪಾಡಿ ಮುನ್ನಡೆಸಿಕೊಂಡು ಹೋಗುವದು ನಮ್ಮೆಲ್ಲರ ಜವಾಬ್ದಾರಿ : ಶಾಸಕ ರಾಜು ಕಾಗೆ
ಕಾಗವಾಡ: ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮ ಭಾರತ ಸಂವಿಧಾನ ಆ ಸಂವಿಧಾನಕ್ಕೆ ನಾವೆಲ್ಲರೂ ಗೌರವ ಕೊಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ರಾಜು ಕಾಗೆ ಅವರು ಶಿವಾನಂದ ಮಹಾವಿದ್ಯಾಲಯ ಕಾಗವಾಡ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹೇಳಿದರು.
ಅವರು ಮಂಗಳವಾರ ದಿ.೧೫ ರಂದು ಸ್ವಾತಂತ್ರ‍್ಯ ದಿನಾಚರಣೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ, ಸ್ವಾತಂತ್ಯ ಪಡೆಯಲು ಬಹಳಷ್ಟು ತೊಂದರೆ ಅನುಭವಿಸಿ ಈ ಸ್ವಾತಂತ್ರ‍್ಯ ಪಡೆದಿದ್ದೇವೆ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ನಮ್ಮ ದೇಶದ ಖಜಾನೆ ಖಾಲಿ ಮಾಡಿಹೋಗಿದ್ದರು. ಅದನ್ನು ಸುಸ್ಥಿಗೆ ತರಲು ಅನೇಕ ಮಹಾನುಭರ ತ್ಯಾಗವಿದೆ ಅದನ್ನು ನಾವೆಲ್ಲ ಸೇರಿ ಒಂದುಗೂಡಿ ಕಾಪಾಡಿ ಮುನ್ನಡೆಸಿಕೊಂಡು ಹೋಗುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾಗವಾಡ ತಹಶಿಲ್ದಾರ ರಾಜೇಶ್ ಬುರ್ಲಿ ಮಾತನಾಡಿ, ಈ ದಿನ ನಮ್ಮ ರಾಷ್ಟ್ರದ ವಿಶೇಷ ದಿನ. ಈ ಸುಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಪ್ರಾಣಪಣಕ್ಕಿಟ್ಟ ಮಹಾನ್ ನಾಯಕರ ನೆನದು ಈ ಹಬ್ಬವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ‍್ಯ ಎಂದರೆ ಬರೀ ಇತಿಹಾಸದ ನೆನಪಲ್ಲ ಇದರೊಂದಿಗೆ ಸಾಧಿಸಿದ ಅಂಶಗಳನ್ನ ಗಮನಿಸಬೇಕು. ನಮ್ಮ ಸೇನಾ ಶಕ್ತಿ ಎಷ್ಟು ಬಲಿಷ್ಠವಾಗಿದೆ ಎಂದರೆ ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಕೃಷಿ,ಶಿಕ್ಷಣ, ರಂಗದಲ್ಲೂ ಮಾದರಿಯಾಗಿದೆ ಎಂದರು.
ತಹಶಿಲ್ದಾರ ರಾಜೇಶ್ ಬುರ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ಪೋಲಿಸ್, ಎನ್ಎಸ್ಎಸ್, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಧ್ವಜ ವಂದನೆ ಕಾರ್ಯಕ್ರಮ ನಡೆಯಿತು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮತ್ತು ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಸತ್ಕರಿಸಲಾಯಿತು.
ಈ ವೇಳೆ ತಹಶಿಲ್ದಾರ ರಾಜೇಶ್ ಬುರ್ಲಿ, ಸಿಡಿಪಿಒ ಸಂಜಯಕುಮಾರ ಸದಲಗೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು, ಉಪತಹಶಿಲ್ದಾರ ಅಣ್ಣಾಸಾಬ ಕೋರೆ, ಜಿತೇಂದ್ರ ನಿಡೋಣಿ, ಮಲಗೌಡ ಪಾಟೀಲ್, ಪ್ರಾಂಶುಪಾಲ ಎಸ್ ಎ ಕರ್ಕಿ, ಜ್ಯೋತಿಕುಮಾರ ಪಾಟೀಲ್, ಕಾಕಾ ಪಾಟೀಲ್, ರಮೇಶ ಔಗಲೆ, ಚಿದಾನಂದ ಅವಟಿ, ಪ್ರಕಾಶ ದೊಂಡಾರೆ, ಸಿದ್ದು ಒಡೆಯರ್, ಬಾಳು ಕಾಂಬಳೆ ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪ ಮುಂಜೆ ಸ್ವಾಗತಿಸಿ ವಂದಿಸಿದರು. ಜೆ.ಕೆ.ಪಾಟೀಲ್ ನಿರೂಪಿಸಿದರು.