ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ; ಸಮಾಜ ಸೇವಕರಿಂದ ಕನ್ನಡಿಗರಿಗೆ ಬಾಳೆಹಣ್ಣು,ಜಿಲೆಬಿ ವಿತರಣೆ..!
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕನ್ನಡಿಗರಿಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಸೇರಿದಂತೆ ಹಲವು ಸಮಾಜ ಸೇವಕರು ಬಾಳೆಹಣ್ಣು, ಜಿಲೆಬಿ ಹಂಚಿ ಸೇವೆ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ಲಕ್ಷಾಂತರ ಕನ್ನಡಿಗರಿಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ, ಜಾನಕಿ ಸೇವಾ ಸಂಘದ ಅಧ್ಯಕ್ಷ ಡಾ.ಉಮೇಶ ಆಚಾರ್ಯ,ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ,ಸಮಾಜ ಸೇವಕ ವೀರೇಶ ಕಿವಡಸಣ್ಣವರ, ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ವಾಜಿದ್ ಹಿರೆಕೊಡಿ ಅವರಿಂದ ಬಾಳೆ ಹಣ್ಣು, ಜಿಲೆಬಿ ವಿತರಣೆ ಮಾಡಿದರು. ಹಸಿದು ಬಂದವರ ಹೊಟ್ಟೆ ತಣ್ಣಗೆ ಮಾಡಿದ ಇವರಿಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಬೆಳಗಾವಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡೊದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಿದ್ದು ಅವರಿಗೆ ತೊಂದರೆ ಆಗಬಾರದು ಅಂತಾ ಬಾಳೆಹಣ್ಣು ಸೇವೆ ಮಾಡಿದ್ದೇವೆ.ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ.ಮುಂದಿನ ವರ್ಷವೂ ನಮ್ಮ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ತಿಳಿಸಿದರು.