ಕೃಷ್ಣಾನದಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ : ಶಂಕರ ಕಬ್ಬೂರ
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಂಕರ ಶಿವಪ್ಪ ಕಬ್ಬೂರ ಅವರು ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ಅವರು ಗ್ರಾಮದ ಸಮಸ್ಯೆಗಳಾದ ಶುದ್ಧ ಕುಡಿಯೋನೀರು ಹಾಗೂ ಚರಂಡಿ ವ್ಯವಸ್ಥೆಯನ್ನು ಮಾಡಿಸುತ್ತೇನೆ. ಹಾಗೂ ಕೃಷ್ಣಾನದಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಅಧ್ಯಕ್ಷರ ಆಯ್ಕಾ ಪ್ರಕ್ರಿಯೆಯನ್ನು ತಾಲೂಕಾ ಪಂಚಾಯತ್ ಅಧಿಕಾರಿಗಳಾದ ಶಿವಾನಂದ ಕೌಲಾಪುರ, ಪಿ.ಡಿ.ಓ ನಾಗರಾಜ್ ಕಾಂಬಳೆ ಅವರ ಸಮ್ಮುಖದಲ್ಲಿ ನಡೆಯಿತು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಊರಿನ ಹಿರಿಯ ಮುಖಂಡರಾದ ದಿಲೀಪ್ ಕಾಂಬಳೆ ಮತ್ತಿತ್ತರು ಉಪಸ್ಥಿತರಿದ್ದರು.