ವಿಜಯಪೂರದಿಂದ ಬೆಳಗಾವಿಗೆ ಹೊರಟಿದ್ದ ಬಸ್, ಫಾಟಾ ಕಟ್ಟಾಗಿ ಕಬ್ಬಿನ ಗದ್ದೆ ನುಗ್ಗಿದೆ, 30 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಕಾಗವಾಡ : ವಿಜಯಪೂರದಿಂದ ಬೆಳಗಾವಿಗೆ ಹೊರಟಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನ ಫಾಟಾ ತುಂಡಾಗಿ, ಚಾಲಕನ ನಿಯಂತ್ರಣ ತಪ್ಪಿ ಕಾಗವಾಡ ತಾಲೂಕಿನ ನವಲಿಹಾಳ ಬಳಿ ಕಬ್ಬಿನ ಗದ್ದೆಗೆ ನುಗಿದ್ದು, ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಘಟನೆಯು ಗುರುವಾರ(ನ.21) ಸಂಭವಿಸಿದೆ.
ವಿಜಯಪೂರದಿಂದ ಅಥಣಿ ಮಾರ್ಗವಾಗಿ ಬೆಳಗಾವಿಗೆ ಹೊರಟಿರುವ ಬಸ್ ನವಲಿಹಾರ ಬಳಿ ರೋಡ್ ಬ್ರೆಕ್ ಹತ್ತಿರ ಗುಂಡಿಯೊಂದು ಬಿದ್ದಿದ್ದು, ಅದನ್ನು ಬಸ್ ಸವಾರ ದಾಟಿಸಿದ ಕೂಡಲೇ ಬಸ್ ಫಾಟಾ ಕಟ್ ಆಗಿದೆ. ಕೂಡಲೇ ಚಾಲಕ ಬಸ್ ನಿಯಂತ್ರಿಸಲು ಪ್ರಯತ್ನಿಸಿ ಕಬ್ಬಿನ ಗದ್ದೆಗೆ ನುಗ್ಗಿಸಿ ಬಾರಿ ಅನಾಹುತವನ್ನು ತಪ್ಪಿಸಿದ್ದಾನೆ.
ಗಾಯಾಳುಗಳನ್ನು ಅಥಣಿ ಹಾಗೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪಿ.ಎಸ್.ಐ ಜಿ.ಜಿ.ಬಿರಾದರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ವರದಿ : ಹರಿಶ್ಚಂದ್ರ ವಗ್ಗಿ, ಕಾಗವಾಡ