ಟಿಪ್ಪರ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೆ ಸಾವು
ಅಥಣಿ : ಟಿಪ್ಪರ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿದ ಘಟನೆ ಅಥಣಿ ತಾಲೂಕಿನ ಯಲಹಡಲಗಿ ಗ್ರಾಮದಲ್ಲಿ ಬಳಿ ನಡೆದಿದೆ.
ಬುಧವಾರ(ನ.20) ರಂದು ರಾತ್ರಿ ಈ ಅಪಘಾತ ಸಂಬವಿಸಿದ್ದು, ಬೈಕ್ ಸವಾರ ವಿಠ್ಠಲ ಖಂಡೆಕರ್ (39) ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ವಿಠ್ಠಲ ಖಂಡೆಕರ್ ಇವರು ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿದ್ದಾರೆ.
ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡಿಸಿದರು.
ವರದಿ : ಹರಿಶ್ಚಂದ್ರ ವಗ್ಗಿ, ಕಾಗವಾಡ