challenging STAR : ದರ್ಶನ್ ಬರ್ತಡೇಯನ್ನು ಶಾಲಾ ವಿದ್ಯಾರ್ಥಿಗಳಿಗೆ ಬುಕ್ ಮತ್ತು ಸಸಿ ಹಂಚುವ ಮೂಲಕ ಅದ್ದೂರಿ ಆಚರಣೆ
ಗೋಕಾಕ : ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಿಂಗ್ ಹೊರ ಬಂದ ನಂತರ ಅವರ ಬರ್ತಡೇಯನ್ನು ರಾಜ್ಯಾದ್ಯಂತ ಅವರು ಅಭಿಮಾನಿಗಳು ಅದ್ದೂರಿಯಾಗಿ ಆರಚಣೆ ಮಾಡಿದರು.
ಪೆ. 16 ರಂದು ಚಲನಚಿತ್ರ ನಟ ದರ್ಶನ್ ತೂಗುದೀಪ ಅವರ ಬರ್ತಡೇ. ಅವರು ಜೈಲಿನಿಂಗ್ ಹೊರಬಂದಿದ್ದು, ಅವರು ಹೊರಗೆ ಬಂದ ಖುಷಿ, ಜೊತೆಗೆ ಅವರ ಹುಟ್ಟು ಹಬ್ಬ ಇದ್ದ ಕಾರಣ, ಅವರು ಬರ್ತಡೇಯನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವುದಿಲ್ಲವೆಂದು ಅಭಿಮಾನಿಗಳಗೆ ಅವರ ಸಮಸ್ಯೆಯನ್ನು ಹೇಳಿ, ಮುದೊಂದು ದಿನ ಎಲ್ಲ ಅಭಿಮಾನಿಗಳಿಗೆ ಬೇಟಿ ಆಗುವ ವಿಚಾರ ಹೇಳಿದ್ದರು.
ಆದರೇ ಅಭಿಮಾನಿಗಳು ಅದ್ದೂರಿಯಾಗಿ ತಮ್ಮ ತಮ್ಮ ಊರಗಳಿಲ್ಲಿ ಬರ್ತಡೇ ಸೆಲೆಬ್ರಿಷನ್ ಮಾಡಿದ್ದಾರೆ.. ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಬರ್ತಡೇ ಮಾಡಿದ್ದಾರೆ. ಒಬ್ಬರು ದೇವರ ಗುಡಿಯಲ್ಲಿ ಅವರ ಭಾವಚಿತ್ರ ಇಟ್ಟು ಆರತಿ ಬೆಳಗಿ ಪೂಜೆ ಮಾಡುವ ಮೂಲಕ ಆಚರಣೆ ಮಾಡಿದ್ದರೇ, ಮತ್ತೆ ಕೆಲವರು ವಿಭಿನ್ನವಾದ ಆಚರಣೆ ಮಾಡಿದ್ದಾರೆ.
ಹಾಗೇ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ದಚ್ಚು ಅಭಿಮಾನಿಗಳು ರಕ್ತದಾನ ಮಾಡುವ ಜೊತೆಗೆ, ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬುಕ್ಕ ನೀಡುವ ಮೂಲಕ, ಜೊತೆಗೆ ಹಲವು ರೀತಿಯ ಸಸಿಗಳನ್ನು ಗ್ರಾಮ ಪಂಚಾಯತಿ, ಶಾಲೆಗಳಿಗೆ ನೀಡುವ ಮೂಲಕ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಬರ್ತಡೇ ಸೆಲೆಬ್ರಿಷನ್ ಮಾಡುವುದು ವಿಷೇಶವಾಗಿದೆ.
ತಳಕಟನಾಳ ಗ್ರಾಮದ ದಚ್ಚು ಅಭಿಮಾನಿಗಳು ಗ್ರಾಮದ ಹಿರಿಯರಿಂದ ಸಸಿಗಳನ್ನು ಹಂಚುವ ಮೂಲಕ ದಚ್ಚು ಮೇಲಿರುವ ಅಭಿಮಾನವನ್ನು ಮೆರೆದಿದ್ದಾರೆ.