ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ
ದಾವಣಗೆರೆ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ದಿವ್ಯಾ ಪರಮೇಶಪ್ಪ ಕುಂದಗೋಳ ಅವರಿಗೆ ದಾವಣಗೆರೆ ಶಿವಗಂಗೋತ್ರಿ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಬುಧವಾರ(ಏ.2) ನೀಡಿ ಗೌರವಿಸಲಾಯಿತು.

ದಾವಣಗೆರೆ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವವು ಅತೀ ವಿಜೃಂಭಣೆಯಿಂದ ನಡೆಯಿತು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯಾ ಪರಮೇಶಪ್ಪ ಕುಂದಗೋಳ ಅವರು “ಅರ್ಥಶಾಸ್ತ್ರ” ವಿಷಯದಲ್ಲಿ ಗೌರವ ಡಾಕ್ಟರೇಟ್ (ಪಿ.ಎಚ್.ಡಿ) ಪದವಿ ಪಡೆದರು.
ಈ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸಿದ್ದರು.
ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾರತೀಯ ಜೀವ ರಸಾಯನಶಾಸ್ತ್ರಜ್ಞ ಮತ್ತು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾದ ಪದ್ಮಭೂಷಣ ಪ್ರೋ ಪಿ. ಬಲರಾಮ್ ಅವರು ಆಗಮಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಡಿ.ಕುಂಬಾರ, ಮೌಲ್ಯಮಾಪನ ಕುಲಸಚಿವರಾದ ಪ್ರೋ.ರಮೇಶ ಸಿ.ಕೆ, ಹಾಗೂ ಪ್ರಭಾರ ಕುಲಸಚಿವರಾದ ಪ್ರೋ.ಆರ್.ಶಶಿದರ್ ಮತ್ತಿತ್ತರು ಉಪಸ್ಥಿತರಿದ್ದರು.