ಬೇಡಿಕೆಗಳ ಮೇಲೆ ಬೆಳಕು ಚೆಲ್ಲುವ ಪತ್ರ ದ’ಮುಖೇನ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ
ಅಥಣಿ: 1970ರ ದಶಕದಿಂದ ಇಲ್ಲಿಯವರೆಗೆ ಅಂದರೆ 2025 ರ ತನಕ ‘ಹರಿಜನ ಹೊಲಗಳಿಗೆ ಹಾದಿ’ಇಲ್ಲ. ಶ್ರೀಮತಿ ದಿವಂಗತ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಟಿನೆಂಟ್ಆಕ್ಟ್ ಅಡಿಯಲ್ಲಿ ಸರ್ಕಾರ ನೀಡಿದ ಸುಮಾರು 64 ಎಕರೆ ಹೊಲವನ್ನ ಮಂಜೂರು ಮಾಡಿಲಾಗಿತ್ತು.
ಇಷ್ಟು ಜಮೀನಿನಲ್ಲಿ 100 ಕುಟುಂಬ ಬದುಕು ಕಟ್ಟಿಕೊಳ್ಳಬಹುದು; ದುರ್ದೈವದ ಸಂಗತಿ ಎಂದರೆ ಹೊಲಕ್ಕೆ ಹಾದಿನೇ ಇಲ್ಲ! ಇತ್ತೀಚಿಗಷ್ಟೇ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ನೀರು ಕೂಡ ಆಗಿದೆ ಆದರೆ, ಹಾದಿಯಿಲ್ಲದೆ ನಿರರ್ಥಕವೆನಿಸಿದೆ.
ಆದುದರಿಂದ ದಿಲೀಪ್ ಕಾಂಬ್ಳೆ. ಸುನಿಲ್ ಕಾಂಬ್ಳೆ. ಪಾರಿಸ್, ಸಂಜು, ಸದಾಶಿವ್, ಭೀ೦ಮಪ್ಪ, ಮಾರುತಿ ಮುಂತಾದವರೆಲ್ಲ ಸೇರಿ ಇಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರಿಗೆ ‘ಬೇಡಿಕೆಗಳ ಮೇಲೆ ಬೆಳಕು ಚೆಲ್ಲುವ ಪತ್ರ ದ’ಮುಖೇನ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇಣು ಕರ್ನಾಟಕ ದಿನಪತ್ರಿಕೆ ಯ ಪತ್ರಕರ್ತರಾದ ಶ್ರೀ ವಿಜಯ ಮೇಲ್ಗಡೆ ಅವರು ಉಪಸ್ಥಿತರಿದ್ದರು.