ರಾಯಭಾಗ ಪಟ್ಟದಲ್ಲಿ ಶಕ್ತಿ ಪ್ರದರ್ಶಿಸಿದ ಜನಾರ್ಧನ ರೆಡ್ಡಿ
27ನೇ ವಯಸ್ಸಿನಲ್ಲಿ ಬಳ್ಳಾರಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೆ ಎಂದು ಹೇಳಿದ ಜನಾರ್ಧನ ರೆಡ್ಡಿ ಬಿಜೆಪಿ ಯ ಶ್ರೀರಾಮುಲುರವರನ್ನು ನೆನೆದು ,ಸೋನಿಯಾ ಗಾಂಧಿ ವಿರುದ್ಧ ನಿಂತ ಶುಷ್ಮಾ ಸ್ವರಾಜ್ಯ ಪರ ಬ್ಯಾಟ್ ಬಿಸಿದ್ದೆ ನಾನು ಎಂದು ಹೇಳಿದ್ದಾರೆ.
2008ರಲ್ಲಿ ಬಿಜೆಪಿ ಕರ್ನಾಟಕ ಚುಕ್ಕಾಣಿ ಹಿಡಿಯಲು ರೆಡ್ಡಿ ಕಾರಣ ಎಂದು ಇಡಿ ದೇಶ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.
ಹೆಲಿಕ್ಯಾಪ್ಟರ್ ಟೂರಿಸಂ ಸ್ಟಾರ್ಟ್ ಮಾಡಿದ್ದೂ ನಾನು ಹೇಳಿದ್ದಾರೆ,ಗುಲ್ಬರ್ಗಾದಲ್ಲಿ ವಿಮಾನ ಶ್ರಯ ನಾನೆ ಪ್ರಾರಂಭ ಮಾಡಿದ್ದು ನಾನು ಎಂದು ರೆಡ್ಡಿ ಹೇಳಿದ್ದಾರೆ.
ಕುಡಿಯುವ ನೀರು ಮತ್ತು ರೈತರ ಪರ ಅನೇಕ ಅಭಿವೃದ್ಧಿ ಕೆಲಸ ಕೈಕೊಂಡಿದ್ದು ನಾನೆ ಎಂದು ಹೇಳಿದ್ದಾರೆ,ನನ್ನನ್ನು ಬಲೆಗೆ ಹಾಕಿ ರಾಜಕೀಯ ಮತ್ತು ಜನರಿಂದ ದೂರ ಇರುವಂತೆ ಮಾಡಿದ್ದು ನನ್ನ ಜೊತೆ ಇದ್ದವರೇ ಎಂದು ರೆಡ್ಡಿ ಹೇಳಿದ್ದಾರೆ.
ಭಗವಾನ ಶ್ರೀರಾಮರನ್ನು ನೆನೆದು ಬಸವಣ್ಣವರ ವಚನದ ಮೂಲಕ ಜನರ ಮನ ಗೆದ್ದ ರೆಡ್ಡಿ,ಕಷ್ಟದಲಿರುವ ಜನರಿಗೆ ಸಹಾಯ ಮಾಡುವ ವ್ಯಕ್ತಿ ರೆಡ್ಡಿ ಎಂದು ಹೇಳಿದ್ದಾರೆ.
ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ ರೆಡ್ಡಿ , ವೋಟ್ ಕೇಳಲು ಅವರಿಗೆ ನಾಚಿಕೆ ಆಗಬೇಕು ಎಂದು ಹೇಳಿದ್ದಾರೆ.
5 ಕೋಟಿ ವೆಚ್ಚದಲ್ಲಿ ಟ್ರೈನಿಂಗ್ ಕೊಡುವ ಯೋಜನೆ ಬಗ್ಗೆ ತಿಳಿಸಿದ ರೆಡ್ಡಿ ,ಪಿ ರಾಜು ಕೈ ಹಿಡಿದಂತೆ ಮಾಜಿ ಸೈನಿಕ ಭಜಂತ್ರಿ ಯವರ ಕೈ ಕಿಡಿಯಿರಿ ಎಂದು ರೆಡ್ಡಿ ಹೇಳಿದ್ದಾರೆ.
ಭಜಂತ್ರಿಯವರನ್ನು ಗುಣಗಾನ ಮಾಡಿದ ರೆಡ್ಡಿ ,ದೇಶ ಕಾಯುವ ಸೈನಿಕ ಈಗ ಕುಡಚಿ ಕಾಯುತ್ತಾನೆ ಎಂದು ಹೇಳಿದ್ದಾರೆ.ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡಿ ಬಿಡಿಯಾಗಿ ಜನರಿಗೆ ತಿಳಿಹೇಳಿದ ರೆಡ್ಡಿ ಜನರನ್ನು ಆಕರ್ಶಿಸಿದ್ದಾರೆ.