ಬೆಳಗಾವಿ ಮಹಾನಗರ ಪಾಲಿಕೆಯ 21ನೇ ಅವಧಿಯ ಮಹಾಪೌರ, ಉಪ ಮಹಾಪೌರ ಚುನಾವಣೆ ಫೆ6 ರಂದು
ಬೆಳಗಾವಿ : ಮಹಾನಗರ ಪಾಲಿಕೆಯ 21ನೇ ಅವಧಿಗೆ ಮಹಾಪೌರ, ಉಪ ಮಹಾಪೌರ ಚುನಾವಣೆಯನ್ನು ದಿನಾಂಕ: 06-02-2023 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ನಡೆಸಲಾಗುವದು.
ಅಂದು ಮಹಾನಗರ ಪಾಲಿಕೆಯ ಕಾರ್ಯಾಲಯದಲ್ಲಿ ಚುನಾವಣೆ ಪ್ರಕ್ರಿಯೆ ಮುಂಜಾನೆ 10 ಗಂಟೆಗೆ ಪ್ರಾರಂಭವಾಗುವುದು.
ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರರ ಹುದ್ದೆಗಳಿಗೆ ದಿನಾಂಕ: 06-02-2023 ರಂದು ನಡೆಯುವ ಚುನಾವಣೆಯ ಪೂರ್ಣ ವೇಳಾಪಟ್ಟಿಯು ಈ ಕೆಳಗಿನಂತಿದೆ.
- ಮುಂಜಾನೆ 10 ಗಂಟೆಯಿಂದ 1 ಗಂಟೆವರೆಗೆ
ನಾಮಪತ್ರಗಳನ್ನು ಸ್ವೀಕರಿಸುವುದು. - ಮಧ್ಯಾಹ್ನ 3 ಗಂಟೆಗೆ
ಸಭೆ ಸೇರುವುದು; ಮಧ್ಯಾಹ್ನ 3 ರ ನಂತರ
ನಾಮಪತ್ರಗಳ ಪರಿಶೀಲನೆ.
ಕ್ರಮಬದ್ಧ ನಾಮನಿರ್ದೇಶನ, ಘೋಷಣೆ
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು;
ಉಮೇದುವಾರರ ಪಟ್ಟಿ ಘೋಷಣೆ;
ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ.
ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ
ನಡುವಳಿಕೆ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸುವುದು
ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ.
ದಿನಾಂಕ 06-02-2023 ರಂದು ಚುನಾವಣೆಯ ದಿನ ಮಹಾನಗರ ಪಾಲಿಕೆ ಕಾರ್ಯಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಚುನಾಯಿತ ಸದಸ್ಯರುಗಳನ್ನು ಗುರುತಿಸಲು ಪಾಲಿಕೆಯ ಸಿಬ್ಬಂದಿಯವರನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ ಚುನಾಯಿತ ಸದಸ್ಯರುಗಳು ಕಡ್ಡಾಯವಾಗಿ ಗುರುತಿನ ಚೀಟಿ ತರಲು ಕೋರಿದೆ.
ಪಾಲಿಕೆಯ ಸದಸ್ಯರು ತಮ್ಮನ್ನು ಗುರುತಿಸಲು ಇರುವ ಅಧಿಕಾರಿ/ಸಿಬ್ಬಂದಿಗೆ ಸಹಕರಿಸಬೇಕು. ಚುನಾವಣೆ ಹಿನ್ನೆಲೆಯಲ್ಲಿ ಆ ದಿನದಂದು ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.