ಫೆ.5 ರಂದು ಜೊಲ್ಲೆ ಮನೆತನದ ಸಹಕಾರದೊಂದಿಗೆ ಭಾರತದ ಮೊದಲ ಧರ್ಮದಾಯಿ/Charity IVF centre
ವಿಶ್ವದ ಮೊದಲ ಆಯುರ್ವೇದ ವಿಜ್ಞಾನ ಮತ್ತು ಅಲೋಪತಿ ವಿಜ್ಞಾನದ ಸಹಯೋಗದೊಂದಿಗೆ ಉದ್ಘಾಟನೆಗೊಳ್ಳುತ್ತಿರುವ ಐವಿಎಪ್ ಸೆಂಟರ್. Test Tube Baby Centre(IVF) ಚಿಕಿತ್ಸೆಯನ್ನು ಮುಖ್ಯವಾಗಿ ಬಂಜೆತನದ ಚಿಕಿತ್ಸೆಗಾಗಿ ಬಳಸಲಗುತ್ತದೆ ಎಂದರು.
ನೈಸರ್ಗಿಕ ವಿಧಾನದಿಂದ ಗರ್ಭಧರಿಸಲು ಅಸಮರ್ಥತೆ ಹೊಂದಿದವರು ಭಾರತದಲ್ಲಿ ಸುಮಾರು 20-25℅ ವಿವಾಹೊತ ದಂಪತಿಗಳಿದ್ದಾರೆ. ವಿಶ್ವದಾದ್ಯಂತ 30-40℅ ಜನರು ಈ ಸಮಸ್ಯೆ ಹೊಂದಿರುತ್ತಾರೆ. ಭಾರತದಲ್ಲಿ ಬಂಜೆತನದ ಚಿಕಿತ್ಸೆಯು ಕಡಿಮೆ ಸೌಲಭ್ಯಗಳಿಂದಾಗಿ ಮತ್ತು ದುಬಾರಿ ವೆಚ್ಚದಿಂದ ಕೇವಲ 1℅ ಬಂಜೆತನದ ದಂಪತಿಗಳು ಮಾತ್ರ ಈ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಐವಿಏಫ್ ಸದ್ಯ ಭಾರತದಲ್ಲಿ ಪ್ರತಿ ಬಾರಿಗೆ 20 ರಿಂದ 25 ಸಾವಿತ ಬಹು ಚಿಕಿತ್ಸಾ ವೆಚ್ಚಗಳು, ಶೇ.80 ರಷ್ಟು ಹೆಚ್ಚು ಜನರಿಗೆ ಈ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಹಿನ್ನೆಲೆ
ದಿನನಿತ್ಯ ಹಾಗೂ ವಿಶೇಷವಾಗಿ ಹುಣ್ಣಿಮೆಯ ದಿನದಂದು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ಸಾವಿರಾರು ಭಕ್ತರು ಈ ಕೇಂದ್ರವನ್ನು ಒಟ್ಟುಗೂಡಿಸಿ ಸತ್ತಂಗ ಆಚರಿಸುತ್ತಾರೆ. ಅನೇಕ ಭಕ್ತರು ತಮಗೆ ಮಕ್ಕಳಿಲ್ಲದಿರುವ ಬಗ್ಗೆ ತಮ್ಮ ನೋವುಗಳನ್ನು ಪಟ್ಟ ಸ್ವಾಮೀಜಿಯವರ ಗಮನಕ್ಕೆ ತರುತ್ತಾರೆ. ನಾವೆಲ್ಲರು. ತಿಳಿದಿರುವಂತೆ ಪಿತೃತ್ವವು (ತಂದೆ ಮತ್ತು ತಾಯಿ) ಪುರುಷರು ಮತ್ತು – ಮಹಿಳೆಯರಿಗೆ ಜೀವನದ ಒಂದು ಹಂತದಲ್ಲಿ ಪ್ರಮುಖ ಘಟ್ಟವಾಗಿದೆ. ಮಗುವಿನ ಬಯಕೆಯು ಈಡೇರದ ಕಾರಣ ಒತ್ತಡ, ಕೋಪ, ಖಿನ್ನತೆ, ಪ್ರತ್ಯೇಕತೆಯಂತಂಹ ಭಾವನಾತ್ಮಕ ವಿಷಯಗಳಿಗೆ ಕಾರಣವಾಗಿದೆ.
ಅನೇಕ ಸಂದರ್ಭಗಳಲ್ಲಿ ಮಕ್ಕಳನ್ನು ಹೊಂದಿರದ ಮಹಿಳೆಯರು ತಮ್ಮ ಪುರುಷ ತಾಲುದಾರರ ಅಥವ ಗಂಡಂದಿರಲ್ಲಿ ಮೂಲ ಇದ್ದರೂ ಸಹ ಕಳಂಕ ಹಾರಕ ಮತ್ತು ಬಹಿಷ್ಠಾರದಿಂದ ಬಳಲುತ್ತಿದ್ದಾರೆ. ಬಂಜೆತನದ ಸಮಾಜಿಕ ಯದ ಮಹಿಳೆಯರ ಮೇಲೆ ಅಸಮಾನವಾಗಿ ಬೀಳುತ್ತದೆ.
ದಂಪತಿಗಳು ಮಗುವನ್ನು ಪಡೆಯಲು ಸಾದ್ಯವಾಗದಿದ್ದಾಗ ಪುರುಷರು ತಮ್ಮ ಹೆಂಡತಿಯನ್ನು ವಿಚ್ಛೇದನ ಮಾಡಬಹುದು ಅಥವಾ ಇನ್ನೊಬ್ಬ ಮಹಿಳೆಯೊಂದಿಗೆ ಸೇರಿಕೊಳ್ಳಬಹುದು ಹಾಗೂ ಬಹುಪತ್ನಿತ್ವವನ್ನು ಹೊಂದಬಹುದು. ಪುರುಷರು ಬಹುಪತ್ನಿತ್ವವನ್ನು ಅನುಭವಿಸುತ್ತಿದ್ದರೆ ಮಹಿಳೆಯರು ತಮ್ಮ ನೋವಿನೊಂದಿಗೆ ಕಳಂಕದ ಅನುಭವಗಳನ್ನು ಅನುಭವಿಸುತ್ತಾರೆ. ಇಂತಹ ನೂರಾರು ಭಕ್ತರು ಪ್ರತಿ ನಿತ್ಯವು ಮಠಕ್ಕೆ ಭೇಟಿ ನೀಡುತ್ತಾರೆ ಮತ್ತು ಭೇಟಿಯ ಸಮಯದಲ್ಲಿ ಪರಮ ಪೂಜ್ಯ ಸ್ವಾಮಿಜೀಯವರಿಗೆ ಸಮಸ್ಯೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾರಂಭವಾದ ಈ ವಿಚಾರಧಾರನೆಯು IVF ಕೇಂದ್ರವನ್ನು ಸ್ಥಾಪಿಸುವ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ಈ ಸೌಲಭ್ಯ ನಿರ್ಮಾಣಕ್ಕಾಗಿ ಪರಮ ಪೂಜ್ಯ ಸ್ವಾಮೀಜಿಯವರು, ಡಾ: ಚಂದ್ರಶೇಖರ ಸಿದ್ದಾಪೂರ, ಆಯುರ್ವೇದ ತಜ್ಞರು ಮತ್ತು ಡಾ: ವರ್ಷಾ ಪಾಟೀಲರವರುಗಳ ನಡುವೆ ಚರ್ಚೆಯಾದಾಗ ಅದೇ ಸಮಯದಲ್ಲಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಹಾಗೂ ಅಣ್ಣಾಸಾಹೇಬ ಜೊಲ್ಲೆ ಕೂಡಾ ಉಪಸ್ಥಿತರಿದ್ದರು. ಈ ಯೋಜನೆಯನ್ನು ಸೂಕ್ಷ್ಮವಾಗಿ ಅವರುಗಳು ಅವಲೋಕಿಸಿ ಶ್ರೀಮಠದ ಸದ್ದಭಕ್ತರಾಗಿ ಮಹಿಳೆಯಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಯಾಗಿ ( ಅಂದಿನ ) ಈ ತರಹದ ಮಹಿಳೆಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಇದಕ್ಕೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ಜೊಲ್ಲೆ ಗ್ರೂಪ್‌ನಿಂದ ಭರಿಸುವುದಾಗಿ ಘೋಷಣೆ ಮಾಡುತ್ತಾರೆ. ಅಂದಿನಿಂದ ಇಲ್ಲಿಯವರಿಗೂ IVF 2030 ಕಾಮಗಾರಿಗೆ ಬೇಕಾಗುವ ಹಾಗೂ ಯಂತ್ರೋಪಕರಣಗಳಿಗೆ ಬೇಕಾಗುವ ಎಲ್ಲಾ ಹಣಕಾಸಿನ ಸೌಲಭ್ಯಗಳನ್ನು ಒದಗಿಸಿ ಇವತ್ತು ವಿಶ್ವ ಮಟ್ಟದಲ್ಲಿ ಗುರುತಿಸುವ ಸತ್ಕಾರ್ಯವನ್ನು ದಂಪತಿಗಳು ಹಾಗೂ ಅವರ ಮಕ್ಕಳು ಕೈಹೊಂಡಿರುವುದು ತುಂಬಾ ಶ್ಲಾಘನೀಯ.
ಉದ್ದೇಶಿತ ಚಿಕಿತ್ಸಾ ಕೇಂದ್ರವು
ಪೆ.5 ರಂದು ಲೋಕಾರ್ಪಣೆಗೊಳ್ಳಲಿರುವುದು ಶ್ರೀಮಠದ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಇದು ಒಂದು ಎಂಬುದು ನಿದರ್ಶನ.