ಎಂಇಎಸ್ ಮುಖಂಡರಿಂದ ಅರಶಿಣ ಕುಂಕುಮ ಕಾರ್ಯಕ್ರಮ ಆಯೋಜನೆ.
ಬೆಳಗಾವಿ :
ಮಹಾರಾಷ್ಟ್ರ ಎಕೀಕರಣ ಸಮಿತಿ ವತಿಯಿಂದ ಅರಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿತ್ತು.
ಹೌದು ಬೆಳಗಾವಿ ನಗರದಲ್ಲಿನ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಅರಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನ ಮಾಜಿ ಶಾಸಕ ಮನೋಹರ ಕಿಣೇಕರ್, ಮಾಜಿ ಮೇಯರ್ ಶಿವಾಜಿ ಸುಂಟಕರ್, ಸುನೀಲ್ ಅಷ್ಟೇಕರ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.ಹಾಗೇಯೆ ಇದೇ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮರಾಠಾ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ದ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ಆಗುತ್ತಿರುವ ಅನ್ಯಾಯವನ್ನೂ ಕೂಡಾ ಮಹಿಳೆಯರು ಖಂಡಿಸಿ ಇವತ್ತು ಎಲ್ಲಾ ಮಹಿಳಾ ಮಣಿಗಳಿಂದ ವಿಶೇಷವಾಗಿ ಅರಶಿಣ ಕುಂಕುಮ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಸರಸ್ವತಿ ಪಾಟೀಲ, ಪ್ರೇಮಾ ಮೋರೆ,ಕೋಮಲ್ ಮನೋಹರಕರ್,ಮಹೇಶ ಪುಲಾರಕೊಪ್ಪ, ಸೇರಿದಂತೆ ಇನ್ನುಳಿದ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು..