ಪೊಲೀಸರು ಹಾಗೂ ಇಲ್ಲಿನ ರಾಜಕಾರಣಿಗಳು ಯೋಚನೆ ಮಾಡಬೇಕು ಯಾರ ಮೇಲೆ ಗದಪ್ರಹಾರ ಮಾಡುತ್ತಿದ್ದಿರಿ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೀಡುವಂತ ಕೆಲಸ ಯಾರು ಮಾಡಬಾರದು : ಮಹಾದೇವ ತಳವಾರ
ಕನ್ನಡ ಪರ ಹೋರಾಟಗಾರ ಅನಿಲ ದಡ್ಡಿಮನಿ ಮೇಲೆ ಹೌಡಿ ಸೀಟರ್ ಎಂದು ಪೊಲೀಸ್ ಇಲಾಖೆ ನೀಡಿದ ನೋಟಿಸ್ ವಿಚಾರವಾಗಿ ಕನ್ನಡ ಪರ ಸಂಘಟನೆಯವರು ಇಂದು ಸಭೆ ಸೇರಿ ಚರ್ಚೆ ನಡೆಸಿದರು.
ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವಂತ ಕಾರ್ಯವನ್ನು ಪೊಲೀಸ್ರು ಹಾಗೂ ರಾಜಕಾರಣಿಗಳು ಮಾಡಿದ್ದಾರೆ ಮೊದಲಿಂದಲು ಮಾಡುತ್ತಾ ಬಂದಿದ್ದಾರೆ. ಆದರೆ ಕನ್ನಡಿಗರು ಅವತ್ತು ಕುಂದಿಲ್ಲ ಇವತ್ತು ಕುಂದೋದಿಲ್ಲ ಎಂದು ಕರ್ನಾಟಕ ರಕ್ಷಣಾ ವೇಧಿಕೆ ಸಂಚಾಲಕರಾದ ಮಹಾದೇವ ತಳವಾರ ತಿಳಿಸಿದರು.
ಹಂತವರ ಸಾಲಿನಲ್ಲಿ ಸಂಪತಕುಮಾರ ದೇಸಾಯಿ ಹಾಗೂ ಅನಿಲ ದಡ್ಡಿಮನಿ ಬಂದಿರೋದು ಹೆಮ್ಮೆಯ ಸಂಗತಿ. ಪೊಲೀಸರು ಹಾಗೂ ಇಲ್ಲಿನ ರಾಜಕಾರಣಿಗಳು ಯೋಚನೆ ಮಾಡಬೇಕು ಯಾರ ಮೇಲೆ ಗದಪ್ರಹಾರ ಮಾಡುತ್ತಿದ್ದಿರಿ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೀಡುವಂತ ಕೆಲಸ ಯಾರು ಮಾಡಬಾರದು. ಕನ್ನಡ ಪರ ಸಂಘಟನೆಗಳು ಸಹಿಸಿಕೊಳ್ಳುವುದಿಲ್ಲ.
ಆಸೆ ಅಥವಾ ಕನ್ನಡ ಅಭಿಮಾನ ಇರುವುದಾದರೇ ಎಷ್ಟು ಮಂದಿ ಎಂ.ಇ.ಎಸ್ ನವರ ಮೇಲೇ, ರೌಡಿಗಳ ಮೇಲೆ ಇಂತ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವಂತ ಕಾರ್ಯ ಮಾಡಿದ್ದಿರಿ. ನಾವು ಕನ್ನಡ ಹೊರಾಟ ಮಾಡುತ್ತಿದ್ದೇವೆ. ಎಂ.ಇ.ಎಸ್ ನವರಿಗೆ ಮಸಿ ಬಡಿಯದೇ ಅವರಿಗೆ ಪೇರನ್ ಲೌಲಿ ಹಚ್ಚಬೇಕಾ. ಕನ್ನಡ ಹೋರಾಟ ಮಾಡುವವರಿಗೆ ರೌಡಿ ಸೀಟರ್ ಅಂತ ಮುದ್ರೇ ಹಾಕುತ್ತಿರಾ ಇದನ್ನು ನಾವು ಕಂಡಿಸುತ್ತವೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇಧಿಕೆಯ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ ನಾವು ಬೇರೆ ರಾಜ್ಯಕ್ಕೆ ಹೋಗಿ ಕನ್ನಡ ಹೋರಾಟ ಮಾಡುತ್ತಿಲ್ಲ, ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿಯಲ್ಲಿ ನಾಡ ನುಡಿ, ಕನ್ನಡ ಸಂಸ್ಕೃತಿ ಬೆಳೆಸಿ ಉಳಿಸುವಂತಹ ಕೆಲಸ ಸಂಪತ್ ಕುಮಾರ ಹಾಗೂ ಅನಿಲ ಮಾಡುತ್ತಿದ್ದಾರೆ.
ಸರ್ಕಾರ ಹಾಗೂ ಮನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳನ್ನು ನಾವು ಅಭಿನಂದಿಸಿದ್ದೇವೆ ಆದರೆ ದುರದುಷ್ಠಕರ ಎಂದರೇ ಕನ್ನಡ ಪರ ಹೋರಾಟಗಾರರ ಮೇಲೆ ರೌಡಿ ಸೀಟರ್ ಅಂತ ಹಾಕಿ ನೋಟಿಸ್ ಕಳಸುವಂತಹ ಕೆಲಸ ಮಾಡಿದ್ದಾರೆ. ಇದನ್ನು ಯಾವುದೇ ಸಾಮಾನ್ಯ ಕನ್ನಡಿಗನು ಸಹಿಸುವುದಿಲ್ಲ. ಮನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ದೊಡ್ಡ ಮಟ್ಟದ ಹೋರಾಟ ಮಾಡುತ್ತಿದ್ದೆವೆ ಎಂದರು.