ರಮೇಶ ಜಾರಕಿಹೊಳಿ ಬೆಂಕಿ ಜೊತೆ ಸರಸವಾಡುತ್ತಿದ್ದೀರಿ; ರಮೇಶ ಜಾರಕಿಹೊಳಿಗೆ ಎಚ್ಚರಿಕೆ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ..!
ಬೆಳಗಾವಿ: ರಮೇಶ್ ಜಾರಕಿಹೋಳಿಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೂ ಏನ್ ಸಂಬಂಧ? ಯಾರೀ ಅವರು?.ಅವರು ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕರು,ಗ್ರಾಮೀಣ ಕ್ಷೇತ್ರಕ್ಕೆ ಏನು ಸಂಬಂಧ?..ಯಾರು ಇದರ ಬಗ್ಗೆ ಮಾತನಾಡೋದಕ್ಕೆ? ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ರಾಜಹಂಸಗಡ ಕೋಟೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಕ್ರೆಡಿಟ್ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನೂರು ವರ್ಷ ಆಗದ ಕೆಲಸ ಈಗ ಆಗಿದೆ. ರಾಜಹಂಸಗಡ ಕೋಟೆ ಅಭಿವೃದ್ಧಿಯಾಗಬೇಕೆಂಬುದು ಬೆಳಗಾವಿ ತಾಲೂಕಿನ ಜನರ ಆಸೆಯಾಗಿತ್ತು.
ಕೋಟೆ ಮೇಲೆ ಶಿವಾಜಿಮಹಾರಾಜರ ಮೂರ್ತಿ ಸ್ಥಾಪನೆಯಾಗಿದೆ ಎಂದರು.
ಸರ್ಕಾರದ ಅನುದಾನ ಬಳಕೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಹೊರಟಿರುವ ವಿಚಾರಕ್ಕೆ, ರಮೇಶ್ ಜಾರಕಿಹೋಳಿಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೂ ಏನ್ ಸಂಬಂಧ? ಯಾರು ಅವರು?… ಅವರು ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕರು,ಗ್ರಾಮೀಣ ಕ್ಷೇತ್ರಕ್ಕೆ ಏನು ಸಂಬಂಧ?. ಯಾರೀ ಅವರ ಇದರ ಬಗ್ಗೆ ಮಾತನಾಡೋದಕ್ಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥರಿದ್ದಾರೆ. ಅಭಿವೃದ್ಧಿ ಮಾಡುತ್ತಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಕರ್ ಗೆ ಜ್ಞಾನ ಇದೆ.ನೀವು ಗೋಕಾಕ್ ಬಗ್ಗೆ ವಿಚಾರ ಮಾಡಿ.ಇಲ್ಲಿ ಏನು ನಡೆದಿದೆ ಎಂದು ಹೇಳಲು ನಿಮಗೆ ಹಕ್ಕೂ ಇಲ್ಲ, ಅಧಿಕಾರವೂ ಇಲ್ಲ.
ಇಲ್ಲಿಗೆ ಬಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರ ಹಕ್ಕು ಚ್ಯುತಿ ಮಾಡಬೇಡಿ ಎಂದು ರಮೇಶ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಚ್ಚರಿಕೆ ನೀಡಿದ್ದಾರೆ.