ಅಜಾನ್ ಹಿನ್ನೆಲೆ ಕೆಲ ಹೊತ್ತು ಭಾಷಣ ನಿಲ್ಲಿಸಿದ ಜಮೀರ್
ಖಾನಾಪುರ ಮತ ಕ್ಷೇತ್ರದ ಬಿಡಿ ಗ್ರಾಮದಲ್ಲಿ ಪ್ರಜಾಧ್ವನಿ ಸಮಾವೇಶ . ಜಮೀರ ಅಹಮ್ಮದ್ ಭಾಷಣ ವೇಳೆ ಅಜಾನ್. ಅಜಾನ್ ಹಿನ್ನೆಲೆ ಕೆಲ ಹೊತ್ತು ಭಾಷಣ ನಿಲ್ಲಿಸಿದ ಜಮೀರ್. ಅಜಾನ್ ಮುಗಿದ ಬಳಿಕ ಮತ್ತೆ ಭಾಷಣ ಆರಂಭಿಸಿದ ಜಮೀರ್ ಅಹಮ್ಮದ್..
ಮುಸ್ಲಿಂ ಏಳಿಗೆ ಹಿಂದೆ ಸಿದ್ದರಾಮಯ್ಯ ಅವರು ಅನೇಕ ಕೋಡುಗೆ ನೀಡಿದ್ದಾರೆ. ಮುಸ್ಲಿಂರ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಶಾದಿ ಮಹಲ್ ಕಟ್ಟಿ ಅನುದಾನ ನೀಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಶಾದಿ ಮಹಲ್ ಹಾಗೂ ಶಾದಿ ಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದಾರೆ ಎಂದರು.
ಮುಸ್ಲಿಂರು ಯಾರು ಜೆಡಿಎಸ್ ಗೆ ವೋಟ್ ಹಾಕಬೇಡಿ. ಜೆಡಿಎಸ್ ಗೆ ಹಾಕುವ ಪ್ರತಿಯೊಂದು ವೋಟ್ ಬಿಜೆಪಿಗೆ ಹಾಕಿದಂತೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ಟಿಪ್ಪು ಜಯಂತಿ ಪ್ರಾರಂಭಿಸಿದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರತಿ ಬಡ ವ್ಯಕ್ತಿಗೆ 7 ಕೆಜೆ ಅಕ್ಕಿ ಕೊಟ್ಟಿದ್ರು. ಆದರೆ ಬಿಜೆಪಿ ಸರ್ಕಾರ ಅಕ್ಕಿಯನ್ನು 7 ರಿಂದ 5 ಕೆಜಿಗೆ ಇಳಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ಆದರೆ 10 ಕೆಜಿ ಅಕ್ಕಿ ಕೊಡ್ತಿವಿ ಎಂದ ಜಮೀರ್ ಅಹಮ್ಮದ್.