ಮುಂಡರಗಿ.ಸಾಮೂಹಿಕ ಶೌಚಾಲಯಕ್ಕಾಗಿ ಸತತ ಏಳು ದಿನಗಳಿಂದ ಅಹೊರಾತ್ರಿ ಧರಣಿ ಮಾಡುತ್ತಿದ್ದ ಡಂಬಳ ಗ್ರಾಮದ ಮಹಿಳೆಯರಿಗೆ ಇಂದು ಜಯ ಸಿಕ್ಕಂತಾಗಿದೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ವಿವಿಧ ವಾರ್ಡಿನ ಮಹಿಳೆಯರು ಗ್ರಾಮ ಪಂಚಾಯಿತಿ ಮುಂದೆ ಸಾಮೂಹಿಕ ಶೌಚಾಲಯಕ್ಕಾಗಿ ಧರಣಿ ಸತ್ಯಾಗ್ರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಆದೇಶದ ಮೇರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಎಸ್ ಕೆ ಇನಾಂದಾರ್ ಹಾಗೂ ಎಂ ಎಸ್ ಕೊಲ೯ಹಳ್ಳಿ ತಾಲೂಕ ಪಂಚಾಯತ್ ಅಧಿಕಾರಿಗಳಾದ ವಿಶ್ವನಾಥ್ ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ಅನಿಲಗೌಡ ಮಲ್ಲನಗೌಡರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ್ ವಾಲ್ಮೀಕಿ ಅವರು ಮಹಿಳೆಯರ ಸಾಮೂಹಿಕ ಶೌಚಾಲಯ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲು ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಭರವಸೆ ನೀಡಿ ಮನವಿ ಸ್ವೀಕರಿಸಿದರು ಮಹಿಳೆಯರ ಅಹೋರಾತ್ರಿ ಧರಣಿಗೆ ಜಯ ಸಿಕ್ಕಂತಾಗಿದೆ ಈಗಲಾದರೂ ಈ ಮಹಿಳೆಯರ ಕನಸು ನನಸಾಗುತ್ತಾ ಅಥವಾ ಮತ್ತೊಮ್ಮೆ ಕಾದು ನೋಡೋಣ