ನಂದಗಡ ಅಭಿವೃದ್ಧಿಗೆ 258 ಕೋಟಿ ಕೊಟ್ಟಿದ್ದು ನಾನು, ಈಗ ಬಿಜೆಪಿಗೆ ನಂದಗಡ ನೇನಪಾಗಿದೆ.
ಈ ಅನಿಷ್ಟ ಬಿಜೆಪಿ ಸರ್ಕಾರ ತೊಲಗಬೇಕು ಎಂದ ಸಿದ್ದರಾಮಯ್ಯ.
ಖಾನಾಪುರ ಮತಕ್ಷೇತ್ರದ ಬಿಡಿ ಗ್ರಾಮದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ, ನಮ್ಮ ಸರ್ಕಾರ ಬಂದ್ರೆ ಖಾನಾಪುರ ಕ್ಷೇತ್ತಕ್ಕೆ ಬೇಕಾದಷ್ಟು ಅನುದಾನ ನೀಡುತ್ತೇನೆ. ನಾನು ಸಿಎಂ ಇದ್ದಾಗ ಅಂಜಲಿ ಎಂಎಲ್ಎ ಆಗಿದ್ರೆ ನಾಲ್ಕೈದು ಸಾವಿರು ಕೋಟಿ ಅನುದಾನ ಸಿಗುತ್ತಿತ್ತು. ಮುಂದೆ ಖಾನಾಪುರ ಕ್ಷೇತ್ರಕ್ಕೆ ನಾಲ್ಕೈದು ಸಾವಿರು ಕೋಟಿ ಅನುದಾನ ಕೊಡುತ್ತೇವೆ ಎಂದರು.
ನಾಳೆ ನಂದಗಡ ಗ್ರಾಮದಲ್ಲಿ ರಾಜನಾಥ ಸಿಂಗ್ ಸಮಾವೇಶ ಮಾಡುತ್ತಿದ್ದಾರೆ. ಆದರೆ ನಂದಗಡ ಅಭಿವೃದ್ಧಿಗೆ 258 ಕೋಟಿ ಕೊಟ್ಟಿದ್ದು ನಾನು, ಈಗ ಬಿಜೆಪಿಗೆ ನಂದಗಡ ನೇನಪಾಗಿದೆ. ವಿಜಯ ಸಂಕಲ್ಪ ಬಿಜೆಪಿಯವರು ಮಾಡಲಿ, ಆದರೆ ಅವರು ಗೆಲ್ಲಬೇಕೋ ಅಥವಾ ಬೇಡವೋ ಎಂಬುದನ್ನು ಮತದಾರರು ಹೇಳಬೇಕು ಎಂದು ಹೇಳಿದರು.
ಖಾನಾಪುರದಲ್ಲಿ ಪ್ರವಾಹ ಬಂದಾಗ ಕೇಂದ್ರ ಮಂತ್ರಿಗಳು ಯಾರಾದ್ರು ಬಂದಿದ್ರಾ. ಪ್ರವಾಹ ಬಂದು ಖಾನಾಪುರದಲ್ಲಿ ಸಾಕಷ್ಟು ಹಾನಿಯಾಗಿತ್ತು. ಅಮಿತ್ ಶಾ ಬರಲಿಲ್ಲ, ನಡ್ಡಾ ಬರಲಿಲ್ಲ, ಮೋದಿ ಬರಲಿಲ್ಲ, ಆದರೆ ಈಗ ಯಾಕೆ ಬರುತ್ತಿದ್ದಿರಾ. ಚುನಾವಣೆ ಬಂದಾಗ ಜನ ಹತ್ರಾ ಹೊದ್ರೆ ವೋಟ್ ಹಾಕ್ತಾರೆ ಅಂದುಕೊಂಡಿದ್ದಾರೆ. ಈ ಅನಿಷ್ಟ ಬಿಜೆಪಿ ಸರ್ಕಾರ ತೊಲಗಬೇಕು ಎಂದ ಸಿದ್ದರಾಮಯ್ಯ