ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ರಾಯಬಾಗ : ಹಾಜರಾತಿ ವಹಿಗೆ ಸಹಿ ಮಾಡಿ ಕರ್ತವ್ಯ ನಿರ್ವಹಿಸದೆ ಚಕ್ಕರ ಹೊಡೆದಿರುವ ಘಟನೆ ನಡೆದಿದೆ.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರ ಕರ್ಮಗೇಡಿತನ ಇದು. ಇಬ್ಬರು ಶಿಕ್ಷಕರು ಸರ್ಕಾರಿ ಕೆಲಸ ದಿಕ್ಕರಿಸಿ ಮಜಾ ಮಾಡೋಕೆ ಅಥಣಿಯ ಮುರಗುಂಡಿಗೆ ಹೋಗಿದ್ದಾರೆ.

ಪ್ರಭಾರಿ ಮುಖ್ಯ ಶಿಕ್ಷಕರಿಗೆ ಯಾವುದೇ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಇದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ *ಸುಟ್ಟಟ್ಟಿ* ಗ್ರಾಮದ ಲ್ಲಿರೋ ಮುರಾರ್ಜಿ ದೇಸಾಯಿ ವಸತಿ ಶಾಲೆ.
ರುದ್ರಯ್ಯ ಹಿರೇಮಠ (ವಿಜ್ಞಾನ)ಶಿಕ್ಷಕ ಹಾಗೂ ಬಾಹುಬಲಿ ಒಡೆಯರ ಚಕ್ಕರ್ ಹಾಕಿದ ಮಹಾಶಯ. ಸುಟ್ಟಟ್ಟಿ ಶಾಲೆಯ ಶಿಕ್ಷಕಿ ಬೇರೊಂದು ಶಾಲೆಗೆ ವರ್ಗಾವಣೆಯಾಗಿತ್ತು, ಅವರನ್ನು ಕಳಿಸೋಕೆ ಹೋಗಿದ್ವಿ ಅಂತ ಉಡಾಪೆ ಉತ್ತರ.
ಖಚಿತ ಮಾಹಿತಿ ಮೇರೆಗೆ ವೇಣು ಕರ್ನಾಟಕ ದಿನ ಪತ್ರಿಕೆ ತಂಡ ಶಾಲೆಗೆ ದೌಡಯಿಸಿ ಮಾಹಿತಿ ಪಡೆದುಕೊಂಡಿದೆ. ಪ್ರಭಾರಿ ಪ್ರಿನ್ಸಿಪಾಲ ರಿಯಾಜ ರಿಯಾಜ್ ಹಾಗೂ ಸಿಬ್ಬಂದಿ ಯಿಂದ ಸಾಕ್ಷಿ ನಾಶ ಪಡಿಸುವ ಹುನ್ನಾರ ಕೂಡ ನಡೆಯಿತು.
ಏನೇ ಆಗಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಈ ಕುರಿತು ಗಮನ ಹರಿಸಿ ತಪ್ಪಿತಸ್ಥ ಶಿಕ್ಷರನ್ನು ಅಮಾನತು ಮಾಡಬೇಕಿದೆ.
ಇವಾಗ್ ಆದ್ರೂ ಕ್ರಮ ಕೈಗೊಳ್ಳುತ್ತಾರಾ ಅಧಿಕಾರಿಗಳು ಕಾಯ್ದೆ ನೋಡೋಣ..