ದಕ್ಷಿಣ ಭಾರತದಲ್ಲಿ ಕರ್ನಾಟಕ ನಂಬರ 1 ರಾಜ್ಯ, ಬೊಮ್ಮಾಯಿ ಉತ್ತಮ ಸಿಎಂ ಎಂದ ರಾಜನಾಥ ಸಿಂಗ
ಬೆಳಗಾವಿ :ನಂದಗಡನಲ್ಲಿ ಮಾತನಾಡಿದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಸಿ ಎಂ ಬೊಮ್ಮಾಯಿಯವರು ಸರಳ ಸಜ್ಜನ ವ್ಯಕ್ತಿ ಎಂದು ಹೇಳಿದ್ದ ಸಿಂಗ್ ತ್ರಿಪುರ ಮತ್ತು ನಾಗಾಲ್ಯಾಂಡನಲ್ಲಿ ಬಿಜೆಪಿ ಗೆಲುವಿನ ಕೇಕೆ ಬಿಗಿದೆ ಎಂದು ಹೇಳಿದ್ದಾರೆ.
ವಿಶ್ವದ ಉದ್ದಗಲಕ್ಕೂ ಬಸವೇಶ್ವರ ,ಕಿತ್ತೂರ್ ರಾಣಿ ಚೆನ್ನಮ್ಮ ,ಸಂಗೊಳ್ಳಿರಾಯಣ್ಣ ನವರ ಹೆಸರು ಜನ ಗುಣಗಾಣಿಸುತ್ತಾರೆ ಎಂದು ಹೇಳಿದ ಸಿಂಗ್ ಕರುನಾಡಿನ ಹಿರಿಮೆ ವರ್ಣಿಸಿದ್ದಾರೆ.
ಕರ್ನಾಟಕ ಶೂರ ವೀರರ ನಾಡು ಎಂದು ಹೇಳಿದ ಸಿಂಗ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅರಳುವಂತೆ ಮಾಡುತ್ತೇವೆ ಎಂದು ಸಿಂಗ ಹೇಳಿದ್ದಾರೆ.
2018ರ ಎಲೆಕ್ಷನ್ ನೆನದ ಸಿಂಗ್ ಬಿ ಎಸ್ ವೈಯವರ ಗುಣಗಾನ ಮಾಡಿ ಯಡಿಯೂರಪ್ಪಯವರನ್ನು ಪಾರ್ಲಿಮೆಂಟ್ ಬೋರ್ಡ್ ಸದಸ್ಯ ಮಾಡಿ ಯಡಿಯೂರಪ್ಪರಿಗೆ ಕಿರು ಧನ್ಯವಾದವನ್ನು ಬಿಜೆಪಿ ಸಲ್ಲಿಸಿದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕ ನಂಬರ 1 ರಾಜ್ಯವಾಗಲಿದೆ ಎಂದು ಸಿಂಗ್ ಹೇಳಿದ ಸಿಂಗ್ ,50 ವರ್ಷದಲ್ಲಿ ಕಾಂಗ್ರೆಸ್ ಮಾಡಲಾಗದ ಕೆಲಸ ಬಿಜೆಪಿ 9ವರ್ಷದಲ್ಲಿ ಮಾಡಿ ತೋರಿಸಿದೆ ಮತ್ತು ಕರ್ನಾಟಕದಲ್ಲಿ ಹೆಲಿಕಾಪ್ಟರ್ ತಯಾರಿಕೆಯಿಂದ ಅನೇಕ ಜನರಿಗೆ ಉದ್ಯೋಗ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಪ್ರತಿ ಮನೆಗೆ ಮತ್ತು ಪ್ರತಿ ಹೊಲಕ್ಕೆ ನೀರು ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡಿ ಬಿಜೆಪಿ ಏನು ಹೇಳುತ್ತೋ ಅದನ ಮಾಡಿ ತೋರಿಸುತ್ತೆ ಎಂದು ಹೇಳಿದ್ದಾರೆ.
ಪ್ರಾಣ್ ಜಾಯೇ ಪರ್ ವಚನ ನಾ ಜಾಯೇ ಎಂದು ಬಿಜೆಪಿಯ ಕರ್ತವ್ಯವನ್ನು ತಿಳಿಸಿದ್ದಾರೆ.
3ತಲಾಕ ವಿರುದ್ದ ಗುಡುಗಿದ ಸಿಂಗ ಮುಸ್ಲಿಂ ಮಹಿಳೆಯರ ಪರ ಬಿಜೆಪಿ ಯಾವಾಗ್ಲೂ ನಿಂತಿದೆ ಎಂದು ಹೇಳಿದ್ದಾರೆ.
ದೇಶದ 8ಕೋಟಿ ಮನೆಗೆ ನೀರು ತಲುಪುವಂತೆ ಮಾಡಿದ್ದು ಪ್ರಧಾನಿ ,ಉಚಿತ ಊಟ ಮತ್ತು ಫುಡ್ ಸೆಕ್ಯೂರಿಟಿ ಜಾರಿ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಸಿಂಗ ಹೇಳಿದ್ದಾರೆ.
ವಿಶ್ವದ ಯಾವುದೆ ದೇಶದಲ್ಲಿ ಉಚಿತ ವ್ಯಾಕ್ಸೀನ ನೀಡಿಲ್ಲ ಆದರೆ ಭಾರತ ಒಂದೇ ಒಂದು ದೇಶ ಉಚಿತ ವ್ಯಾಕ್ಸೀನ್ ಪ್ರತಿ ಜನರಿಗೆ ನೀಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸನ ಹೈಫೈ ರಾಜಕಾರಣಿಗಳ ವಿರುದ್ದ ಗುಡುಗಿದ ಸಿಂಗ್
ರಾಹುಲಗಾಂಧಿ ಮತ್ತು ಭಾರತ ಜೋಡೋ ಯಾತ್ರೆ ವಿರುದ್ದ ಗುಡುಗಿದ್ದಾರೆ ಭಾರತ ಯಾವತ್ತೂ ಒಂದು ದೇಶವಾಗಿದೆ ಮತ್ತು ಈ ಕಾಂಗ್ರೆಸ್ ಏನು ಜೋಡೋ ಮಾಡುತ್ತಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.