ಯಲಹಂಕ; ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವರಾಜಣ್ಣ ಅವರು ಇಂದು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಕ್ಷೇತ್ರದ ಕುಂಬಾರಹಳ್ಳಿಗೆ ಭೇಟಿ ನೀಡಿದ ಕೇಶವ ರಾಜಣ್ಣ ಅವರು ಮುಖಂಡರೊಬ್ಬರು ಮನೆಯಲ್ಲಿ ಆಯೋಜಿಸಿದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ನಂತರ ಗ್ರಾಮದ ಕಾಂಗ್ರೆಸ್ ಮುಖಂಡರು ಆಯೋಜಿಸಿದ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರು ಹಾಗೂ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು..
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವರಾಜಣ್ಣ ಹಿರಿಯ ಮುಖಂಡರಾದ ಪಿ .ನರಸಿಂಹಯ್ಯ. ನರಸಿಂಹಮೂರ್ತಿ ಯುವ ಮುಖಂಡರಾದ ಯೋಗೀಶ್. ನರಸಿಂಹರಾಜು. ಕಾರ್ಯಕರ್ತರಾದ ಮಂಜುನಾಥ್. ರವಿಕುಮಾರ್ ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಕೀರ್ತಿರಾಮಚಂದ್ರ ಹಾಗೂ ಗ್ರಾಮದ ಮಹಿಳೆಯರು ಯುವಕರು ಪಾಲ್ಗೊಂಡಿದ್ದರು.