ಯಾರಿಗೂ ಏನು ಮಾತನಾಡುವುದಿಲ್ಲ ಚುನಾವಣೆ ಮುಗಿದಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದ ಲಕ್ಷ್ಮೀ ಹೆಬ್ಬಾಳ್ಕರ
ರಾಜಹಂಸಗಡ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ ನನ್ನ ಕಣ್ಣು ಹಳದಿ ಆಗಿಲ್ಲ, ಕಾಮಾಲೆ ಕಣ್ಣಿನಿಂದ ನಾನು ಏನು ನೋಡುವುದಿಲ್ಲ. ನಾನು ಋಣಾತ್ಮಕವಾಗಿ ವಿಚಾರ ಮಾಡುತ್ತೇನೆ, ಮಾನ್ಯ ಮುಖ್ಯಮಂತ್ರಿಗಳು ಐದು ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ಶಿವಭಕ್ತರಿಗೆ ಅವಹೇಳನ ಮಾಡಿದ್ದಾರೆ, ಅಪೂರ್ಣವಾದ ಮೂರ್ತಿಯನ್ನು ಉದ್ಘಾಟನೆ ಮಾಡಿ, ಸಂಪೂರ್ಣ ಶಿವಾಜಿ ಮಹಾರಾಜರ ಭಕ್ತರಿಗೆ ಅವಮಾನ ಮಾಡಿದ್ದಾರೆ ಎಂದ ಹೇಳಬಹುದು.
ಐವತ್ತು ಸಾವಿರ ಲಕ್ಷ್ಮೀ ಹೆಬ್ಬಾಳ್ಕರ ನನ್ನ ಹತ್ತಿರ ಸಾಲ ಮಾಡಿದ್ದಾರೆ ಎಂದು ಸಂಜಯ ಪಾಟೀಲ್ ಹೇಳಿದ್ದಾರೆ ಎನ್ನುವ ಮಾದ್ಯಮದವರ ಪ್ರಶ್ನೆಗೆ, ಹೆಬ್ಬಾಳ್ಕರ ನಾನು ಬಹಳಷ್ಟು ಸಂತೋಷ, ಬಹಳಷ್ಟು ಅಭಿಮಾನದಿಂದ ಇವತ್ತು ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಿದ್ದೇನೆ ಇನ್ನೊಂದು ದಿನ ತಮ್ಮನ್ನೆಲ್ಲ ಕರೆದು ಉತ್ತರ ನೀಡುತ್ತೇನೆ ಎಂದರು.
ಸಂಜಯ ಪಾಟೀಲ ಲಕ್ಷ್ಮೀಯನ್ನು ಕೈಕೆಗೆ ಹೋಲಿಕೆ ಎನ್ನುವ ಮಾತಿಗೆ ಉತ್ತರಿಸಿದ, ಶಿವ ಭಕ್ತರು ಅಂತ ಹೇಳುತ್ತಿರುವ ಸಂಜಯ ಪಾಟೀಲ, ಶಿವಾಜಿ ಮಹಾರಾಜರು ಮಹಿಳೆಯರಿಗೆ ಮರಿಯಾದೇ ನೀಡುತ್ತಾರೆ ಇವರು ನನ್ನನ್ನು ಕೈಕೆಗ ಹೊಲಿಸಿದ್ದರೆ, ಅವರ ಹೆಂಡತಿ ಮಕ್ಕಳಿಗೆ ಏನು ಅನ್ನಬೇಕು? ಅವರು ಶ್ರೀರಾಮ ಚಂದ್ರರು.
ಯಾರಿಗೂ ಏನು ಮಾತನಾಡುವುದಿಲ್ಲ ಚುನಾವಣೆ ಮುಗಿದಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದರು.
ನಾನು ನಾಲ್ಕುವರೆ ವರ್ಷದಿಂದ ಚುನಾವಣೆ ಪ್ರಚಾರ ಅನ್ನದೇ ಸೇವೆ ಮಾಡಿದ್ದೇನೆ ನಾಳೆಯಿಂದ ಅವರ ಮನೆ ಮಗಳಾಗಿ, ಅವರ ಮನೆಗೆ ಹೋಗಿ ಎಲ್ಲ ಮತದಾರರಲ್ಲಿ ಮತ ಬಿಕ್ಷೆಯನ್ನು ಬೇಡುತ್ತೇನೆ ಎಂದರು.