ಕಲಘಟಗಿಯಲ್ಲಿ ಸಂತೋಷ್ ಲಾಡ್ ಅಬ್ಬರ
ಲಾಡ್ ಪರ ಪುತ್ರ ಕರಣ್ ಅವರಿಂದ ಚುನಾವಣಾ ಪ್ರಚಾರ
ಕಲಘಟಗಿ : ಇಂದು ಕಲಘಟಗಿ ಹಾಗೂ ಅಳ್ನಾವರ ವಿಧಾನಸಭಾ ಕ್ಷೇತ್ರದ ಮಿಶ್ರಿಕೋಟಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ್ ಲಾಡ್ ಬಿರುಸಿನ ಪ್ರಚಾರ ಕೈಗೊಂಡರು, ನಂತರ ಕಲಕುಂಡಿ ಗ್ರಾಮದ ಗ್ರಾಮಸ್ಥರು ಚಕ್ಕಡಿ ಮೂಲಕ ಲಾಡ್ ರನ್ನು ಸ್ವಾಗತಿಸಿದರು.
ನನ್ನ ಅಧಿಕಾರಾವಧಿಯಲ್ಲಿ ಕಲಘಟಗಿಯ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯಾಗಿದೆ. ಈ ಬಾರಿ ಕ್ಷೇತ್ರದ ಜನ ಅಭಿವೃದ್ಧಿ ಮಾಡಿದವರ ಕೈ ಹಿಡಿಯಲಿದ್ದಾರೆ ಎಂದರು.
ಲಾಡ್ ಅವರ ಜೊತೆ ಸಹಸ್ರಾರು ಕೈ ಕಾರ್ಯಕರ್ತರು ಅಲ್ಲದೇ ವಿಶೇಷವಾಗಿ ಪುತ್ರ ಕರಣ್ ಲಾಡ್ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷ. ಕಲಘಟಗಿಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದ್ದು, ಸಂತೋಷ್ ಲಾಡ್ ಅವರು ಗೆಲುವು ಈ ಬಾರಿ ನಿಶ್ಚಿತ ಎನ್ನುವುದು ಕಲಘಟಗಿಯ ಮನೆ ಮನೆ ಮಾತಾಗಿದೆ.
ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳ