ನಗರದ ಅಭಿವೃದ್ಧಿಗೆ ಶ್ರಮಿಸೋನ: ನಗರ ಸೇವಕರಿಗೆ ಕರೆ ನೀಡಿದ ಶಾಸಕ ಅನಿಲ ಬೆನಕೆ
ಬೆಳಗಾವಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಅದನ್ನು ಬಗೆ ಹರಿಸುವ ಕೆಲಸ ಮಾಡಬೇಕು. ಎಲ್ಲ ನಗರ ಸದಸ್ಯರು ನಗರದ ಅಭಿವೃದ್ಧಿಗೆ ಒತ್ತು ನೀಡಬೇಕು. ಜಾತಿ, ಧರ್ಮ, ಭಾಷೆ ಬಿಟ್ಟು ಎಲ್ಲರಿಗೂ ಒಗ್ಗೂಡಿ ಬೆಳಗಾವಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನಗರ ಸೇವಕರಿಗೆ ಶಾಸಕ ಅನಿಲ ಬೆನಕೆ ಅವರು ಕರೆ ನೀಡಿದರು
ಸೋಮವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಪಾಲಿಕೆಯ ಪೂರ್ವಭಾವಿ ಬಜೆಟ್ ಸಭೆಯಲ್ಲಿ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು, ರಾಜ್ಯದಲ್ಲಿ ಅತೀ ದೊಡ್ಡ ಶ್ರೀಮಂತ ಮಹಾನಗರ ಪಾಲಿಕೆ ಬೆಳಗಾವಿಯದ್ದು. ಆದರೆ ಸಮಸ್ಯೆ ಬಹಳಷ್ಟು ಇದೆ. ಕೊರೊನಾ ಮುಗಿದ ಬಳಿಕ ಪಾಲಿಕೆಯ ಕಂದಾಯ ತುಂಬಲು ಜನರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ಕರ ಹೆಚ್ಚಿಗೆ ಮಾಡುವುದು ಸೂಕ್ತವಲ್ಲ ಎಂದರು.
ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಅದನ್ನು ಬಗೆ ಹರಿಸುವ ಕೆಲಸ ಮಾಡಬೇಕು. ಎಲ್ಲ ನಗರ ಸದಸ್ಯರು ನಗರದ ಅಭಿವೃದ್ಧಿಗೆ ಒತ್ತು ನೀಡಬೇಕು. ಈಗಾಗಲೇ ಬೆಳಗಾವಿ ಸ್ಮಾರ್ಟ್ ಸಿಟಿ ಇದೆ. ಜನರು ಸ್ಮಾಟ್೯ ಆಗಬೇಕಿದೆ. ಜನರ ಸಮಸ್ಯೆಯನ್ನು ಅರಿತುಕೊಂಡು ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಶ್ರಮಿಸಬೇಕೆಂದು ಮನವಿ ಮಾಡಿಕೊಂಡರು.
ದಂಡು ಮಂಡಳಿಯವರು ನಗರದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ದಂಡು ಮಂಡಳಿ ಸಿಇಒ ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ. ಕುಡಿಯುವ ನೀರಿನ ಪೈಪ್ ಲೈನ್ ಹಾಕಲು ಅನುಮತಿ ನೀಡದ ದಂಡು ಮಂಡಳಿಗೆ ಪಾಲಿಕೆ ಕುಡಿಯುವ ನೀರು ಕೊಡಬೇಡಿ ಎಂದು ತಾಕೀತು ಮಾಡಿದರು.
ಮೇಯರ್, ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಆಡಳಿತ ಪಕ್ಷದ ಸಭಾ ನಾಯಕ ರಾಜಶೇಖರ ಡೋಣಿ, ಸಮಿವುಲ್ಲಾ ಮಾಡಿವಾಲೆ, ರವಿದೋತ್ರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.