ಕಾಂಗ್ರೆಸ್ ಅಂದ್ರೇ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕ ಇಂದಿರಾ ಗಾಂಧಿ 56ಬಾರಿ ವಿವಿಧ ಚುನಾಯಿತ ಸರ್ಕಾರ ಕಿತ್ತು ಒಗೆದಿದ್ದಾರೆ
ಚಿಕ್ಕೋಡಿ : ಹೆಲಿಕ್ಯಾಪ್ಟರ ಮೂಲಕ ಚಿಕ್ಕೋಡಿಯ , ಅಂಕಲಿ ಶಿವಾಲಯ ಬಳಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಹೆಲಿಪ್ಯಾಡಗೆ ಬಂದಿಳಿದ ಯಡಿಯೂರಪ್ಪ, ಯಡಿಯೂರಪ್ಪ ಅವರಿಗೆ ಸಿ ಟಿ ರವಿ, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ ಆಗಮನ ಮಾಡಿಕೊಂಡರು.
ಅಂಕಲಿ ಗ್ರಾಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ, ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ, ಈ ಬಾರಿ ನಿಶ್ಚಿತವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ, ವಿಜಯ ಸಂಕಲ್ಪ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಯಿತು. ಕಾಂಗ್ರೆಸ್ ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕಿಕೊಂಡು ಕುಳಿತಿದ್ರೂ, ಅವರಿಗೆ ಸೋಲು ಖಚಿತ ಅಂತಾ ಗೊತ್ತಾದ ಬಳಿಕ ಬಾಯಿಗೆ ಬಂದ ಹಾಗೇ ಮಾತನಾಡಲು ಶುರು ಮಾಡಿದ್ದಾರೆ ಎಂದು ಹೇಳಿದರು.
ಒಂದೊಂದೇ ರಾಜ್ಯಗಳಲ್ಲಿ ಸೋಲಿನ ಮೇಲೆ ಸೋಲು ಕಾಂಗ್ರೆಸ್‌ಗೆ ಬರ್ತಿದೆ, ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಿದ್ದಾರೆ. ನೆಹರು ಕುಟುಂಬದ ಅಧಿಕಾರದಲ್ಲಿದ್ರೇ ಪ್ರಜಾಪ್ರಭುತ್ವ ಸುಸ್ಥಿರದಲ್ಲಿರುತ್ತೆ ಅಂದುಕೊಂಡಿದ್ದಾರೆ, ಇಂದಿರಾ ಗಾಂಧಿ 56ಬಾರಿ ವಿವಿಧ ಚುನಾಯಿತ ಸರ್ಕಾರ ಕಿತ್ತು ಒಗೆದಿದ್ದಾರೆ, ಅವರು ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಂದ್ರೇ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕ, ಕಾಂಗ್ರೆಸ್ ಒಳಗೆ ಪ್ರಜಾಪ್ರಭುತ್ವ ತರಲಿ,ವಿದೇಶಿ ನೆಲದಲ್ಲಿ ನಿಂತುಕೊಂಡು ವಿದೇಶಿಯರ ಸಹಾಯದಿಂದ, ಎನಾದ್ರೂ ಮಾಡಿ ಅಧಿಕಾರ ಹಿಡಿಯಬೇಕು ಅಂತಾ ಸಂಚು ರೂಪಿಸುತ್ತಿರುವುದು ದೇಶದ್ರೋಹಕ್ಕೆ ಸಮ, ಈ ದೇಶದ್ರೋಹವನ್ನ ರಾಜ್ಯದ, ದೇಶದ ಜನ ಸಹಿಸುವುದಿಲ್ಲ, ವಿದೇಶಿ ನೆಲದಲ್ಲಿ ನಿಂತು ಭಾರತದ ವ್ಯವಸ್ಥೆ ಬಗ್ಗೆ ಅಪಹಾಸ್ಯ ಮಾಡುವುದನ್ನ ಜನ ಸಹಿಸುವುದಿಲ್ಲ, ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ಹಿಗ್ಗಾಮಗ್ಗಾ ವಾಗ್ದಾಳಿ ನಡೆಸಿದರು.













