ಬೆಳಗಾವಿ ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ತಿಂಗಳು ದಿನಾಂಕ 7, 8, ಹಾಗೂ 9 ರಂದು ಮೂರು ದಿನಗಳ ಕಾಲ “ಹರಿದಾಸ ಹಬ್ಬ” ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಹರಿಭಕ್ತ ಮಂಡಳಿ ನೀಡಿದೆ..
ಸುದ್ದಿಗೋಷ್ಟಿಯಲ್ಲಿ ಹರಿದಾಸ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ರಾಯಚೂರು ಶೇಷಗಿರಿದಾಸ ಅವರು ಮಾತನಾಡಿ, ಬೆಳಗಾವಿಯ ತಿಲಕವಾಡಿಯ ಮಿಲೇನಿಯಂ ಗಾರ್ಡನ್ ನಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾದ ಹರಿದಾಸ ಹಬ್ಬ ನಡೆಯುತ್ತಿದ್ದು, ಬೆಳಗಾವಿಯ ಹರಿದಾಸ ಸೇವಾ ಸಮಿತಿ ಇದರ ಉಸ್ತುವಾರಿ ತಗೆದುಕೊಂಡಿದೆ ಎಂದರು..
ಪ್ರತಿ ದಿವಸ ಮಧ್ಯಾಹ್ನ 3-30 ಕ್ಕೆಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಭಜನೆ, ಆಶೀರ್ವಚನ, ಉಪನ್ಯಾಸ, ದಾಸವಾಣಿ, ಸನ್ಮಾನ ಪ್ರಶಸ್ತಿ ಪ್ರಧಾನ, ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವುದರ ಮೂಲಕ ಹರಿದಾಸರಿಗೆ ನಮನ ಸಲ್ಲಿಸಲಾಗುವುದು ಎಂದರು.
7 ನೆಯ ತಾರಿಕಿನಂದು ಸಂಜೆ, 4-30 ಕ್ಕೆ ಪರಮಪೂಜ್ಯ ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೆಂದ್ರ ತೀರ್ಥ ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗುತ್ತದೆ ಎಂದರು..
ದಾಸ ಸಾಹಿತ್ಯದಲ್ಲಿ ಸಾಧನೆಗೈದ ಹಿರಿಯ ಸಾಧಕರಿಗೆ ನೀಡಲಾಗುವ ಅನಂತಾಡ್ರೀಶ್ ಪ್ರಶಸ್ತಿಯನ್ನು ಈ ಬಾರಿ ಸುಭಾಸ ಕಾಖಂಡಕಿ ಅವರಿಗೆ ಪ್ರಧಾನ ಮಾಡಲಾಗುವದು ಎಂಬ ಮಾಹಿತಿ ನೀಡಿದರು..
ಹರಿದಾಸ ಸಾಹಿತ್ಯದ ಸಾರ ಹಾಗೂ ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸುವದೇ ಈ ಮೂರು ದಿನಗಳ ಕಾಲ ನಡೆಯುವ ಹರಿದಾಸ ಹಬ್ಬದ ಉದ್ದೇಶವಾಗಿದೆ ಎಂದರು..
ಈ ಸುದ್ದಿಗೋಷ್ಠಿಯಲ್ಲಿ ಹರಿದಾಸ ಸೇವಾ ಸಮಿತಿಯ ಪ್ರಮುಖರಾದ, ಭೀಮಸೇನ್ ಮಿರ್ಜಿ, ಜಯತೀರ್ಥ ಸವದತ್ತಿ, ಕೇಶವ್ ಮಾವುಲಿ, ಮಧುಕರ ತೇರದಾಳ, ಸಂಜೀವ್, ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..