ನರೇಂದ್ರ ಮೋದಿ, ನರೇಂದ್ರ ಮೋದಿ ಎಂದು ಅವರನ್ನು ಅಟ್ಟಕ್ಕೆ ಎರಿಸಿ ಮಾತನಾಡಿದ ಸಂಜಯ ಪಾಟೀಲ
ಬೆಳಗಾವಿ : ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಆಲಾಯ್ಯಾನ್ಸ್ ಪಾರ್ಟಿ ಸ್ಥಾಪನೆಯಾಗುತ್ತಿದ್ದು, ಆದ್ದರಿಂದ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಾರ್ಟಿ ಎರಡು ರಾಜ್ಯದಲ್ಲಿ ವಿಜಯ ಸಾಧಿಸಿದ ನಿಮಿತ್ಯ ವಿಜಯೋತ್ಸವವನ್ನು ಇಂದು ನಗರದ ಚನ್ನಮ್ಮ ವೃತ್ತದ ಬಳಿ ಪಟಾಕಿ ಸಿಡಿಸುವ ಮೂಲಕ ಆಚರಣೆ ಮಾಡಿದರು.
ಇಂದು ಎರಡು ರಾಜ್ಯದಲ್ಲಿ ಮುಖ್ಯಮಂತ್ರಿಯವರು ಪ್ರಮಾಣ ವಚನ ಸ್ವಕಾರ ಮಾಡುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತಿ ಇದ್ದು, ಪ್ರೋತ್ಸಾಹ ಮಾಡುತ್ತಿದ್ದಾರೆ. ಪೂರ್ವೋತ್ತರ ದೇಶದಲ್ಲಿ ಇದ್ದ ಮೊದಲಿನ ಪರಿಸ್ಥಿತಿ ಯನ್ನು ಬದಲಾವಣೆ ಮಾಡಿ ಅಲ್ಲಿಯು ಅಭಿವೃದ್ದಿಗೆ ಆದ್ಯತೆ ನೀಡುಬೇಕು ಎಂದು ಬಿಜೆಪಿ ಗುರಿಯಿಟ್ಟುಕೊಂಡಿದೆ ಎಂದು ಸಂಜಯ ಪಾಟೀಲ್ ಹೇಳಿದರು.
ನರೇಂದ್ರ ಮೋದಿ ಅವರನ್ನು ಜಗತ್ತೆ ಉಚ್ಚ ಸ್ಥಾನದಲ್ಲಿದ್ದಾರೆ ಎಂದು ಮೆಚ್ಚುತಿದ್ದಾರೆ. ಭಾರತದಲ್ಲಿಯೂ ಪ್ರತಿಯೊಂದು ರಾಜ್ಯದಲ್ಲಿಯು ಬಿಜೆಪಿ, ನರೇಂದ್ರ ಮೋದಿ ಎನ್ನುವ ವಿಜಯ ಯಾತ್ರೆ ಮೊಳಗಲಿದೆ. ಕರ್ನಾಟಕದಲ್ಲಿಯು ಬಿಜೆಪಿ ಮತ್ತೋಮ್ಮೆ ರಾಜ್ಯಾಡಳಿತ ವಹಿಸಿಕೊಳ್ಳುತ್ತದೆ ಎಂದು ನರೇಂದ್ರ ಮೋದಿ, ನರೇಂದ್ರ ಮೋದಿ ಎಂದು ಅವರನ್ನು ಅಟ್ಟಕ್ಕೆ ಏರಿಸಿ ಮಾತಾನಡಿದ ಮಾಜಿ ಶಾಸಕ ಸಂಜಯ ಪಾಟೀಲ್.
ಮುರಗೇಂದ್ರಗೌಡ ಪಾಟೀಲ್ ಹಾಗೂ ಬೆಳಗಾವಿಯ ಬಿಜೆಪಿ ಮುಖಂಡರು ಕಾರ್ಯಕರ್ತ/ಕಾರ್ಯಕರ್ತೆಯರು ವಿಜಯೋತ್ಸವದಲ್ಲಿ ಉಪಸ್ಥಿತರಿದ್ದರು.