ಕೆಪಿಸಿಸಿ ಕಾರ್ಯಧಕ್ಷ ಆರ್ ದ್ರುವನಾರಾಯಣ ಅಗಲಿಕೆ ಸಿ.ಎಂ.ಎಸ್. ಲಿಂಗಸಗೂರು ವತಿಯಿಂದ ಸಂತಾಪ ಸೂಚನೆ.
ಲಿಂಗಸಗೂರು ..
ರಾಜ್ಯಕಂಡ ದೀಮಂತ ನಾಯಕ ಸರಳ ಸಜ್ಜನಿಕೆಯ ರಾಜಕಾರಣಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ದ್ರುವನಾರಾಯಣ ಅಕಾಲಿಕ ಮರಣದಿಂದ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಇಂತಹ ಸರಳ ಸಜ್ಜನಿಕೆಯ ರಾಜಕಾರಣಿ ಸಿಗುವುದು ಅಪರೂಪ ಇವರ ಸ್ಥಾನವನ್ನು ತುಂಬುವ ಯಾವ ರಾಜಕಾರಣಿಯೂ ಸಿಗಲಾರರು ಎನ್ನುವುದು ಸುಸ್ಪಷ್ಟ.
ಇಂತಹ ನಾಯಕ ನಮ್ಮ ಸಮುದಾಯದವರು ಎನ್ನುವುದು ಹೆಮ್ಮೆಯ ವಿಷಯ.ಇವರ ಅಗಲಿಕೆಯಿಂದ ಸಮುದಾಯ ಬಡಪಾಯಿಯಾಗುದೆ ಎಂದು ಲಿಂಗಸಗೂರು ತಾಲೂಕ ಛಲವಾದಿ ಮಹಾಸಭಾದ ಕಾರ್ಯಧ್ಯಕ್ಷ ಆದಪ್ಪ ಟಿ ಭವಾನಿ ಸಂತಾಪ ಸೂಚಿಸುವ ಮೂಲಕ ದಿವಂಗತರ ಸಾಧನೆಯನ್ನು ಮೆಲುಕು ಹಾಕಿದರು.
ಭಾನುವಾರ ಸಂಜೆ ಲಿಂ
ಗಸಗೂರು ಪಟ್ಟಣದ ಗುರು ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕ ಛಲವಾದಿ ಮಹಾಸಭಾದ ಬಂಧುಗಳು ಸೇರಿ ಮಾಜಿ ಸಚಿವ,ಸಂಸದ ಆರ್ ದ್ರುವನಾರಾಯಣ ಅಕಾಲಿಕ ಮರಣದಿಂದ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವ ಮೂಲಕ ಸಂತಾಪ ಸೂಚಿಸಿದರು.
ಈ ವೇಳೆ ತಾಲ್ಲೂಕು ಛಲವಾದಿ ಮಹಾಸಭಾದ ಕಾರ್ಯದಕ್ಷ ಆದಪ್ಪ ಟಿ ನಗನೂರು ಹಾಗೂ ಪ್ರದಾನ ಕಾರ್ಯದರ್ಶಿ ಸಂಜೀವಪ್ಪ ಛಲವಾದಿ ಹಾಗೂ ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಪಂಪಾಪತಿ ಪರಂಗಿ ಸೇರಿ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.