ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ಗುತ್ತಿಗೆದಾರ ಹಲ್ಲೆ
ಗದಗ: ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ನಡೆದ ಫಲಾನುಭವಿಗಳ ಸಮ್ಮೇಳನದಲ್ಲಿ ವಾರ್ತಾ ಇಲಾಖೆಯ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ, ಗುತ್ತಿಗೆದಾರ ಹನಮಂತಪ್ಪ ಹಟ್ಟಿಮನಿ ಹತ್ನಸಿದ್ದು, ಅವನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ರೋಣ ಹಾಗೂ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರು ರೋಣ ಠಾಣೆಯಲ್ಲಿ ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ. ಇತ್ತೀಚೆಗೆ ಪತ್ರಕರ್ತರು ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ರಾಜಕೀಯ ಗುಂಡಾಗಳು ನಿರ್ಮಿಸುತ್ತಿದ್ದಾರೆ.
ಪತ್ರಕರ್ತರ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ತಕ್ಷಣ ಹಲ್ಲೆಗೆ ಯತ್ನಿಸಿದವರ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಘಟನೆ ಹಿನ್ನೆಲೆ
ರೋಣ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಫಲಾನುಭವಿಗಳ ಸಮ್ಮೇಳನಕ್ಕೆ ಚಾಲನೆ ನೀಡಲಾಗಿತ್ತು.
ಈ ವೇಳೆ ಪತ್ರಕರ್ತರಿಗಾಗಿ ಮೀಸಲಿದ್ದ ಸ್ಥಳದಲ್ಲಿ ಕೂತಿದ್ದ ಗುತ್ತಿಗೆದಾರ ಪತ್ರಕರ್ತರಿಗೆ ಕೂರಲು ಅವಕಾಶ ಮಾಡಿಕೊಡಿ ಅಂತ ವಾರ್ತಾ ಇಲಾಖೆಯ ಸಿಬ್ಬಂದಿ ಹೇಳಿದ್ದಕ್ಕೆ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಹನುಮಂತಪ್ಪ ಹಟ್ಟಿಮನಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಕಾರ್ಯಕ್ರಮದ ಮಧ್ಯೆ ಕೆಲವೊತ್ತು ಗೊಂದಲ ಸೃಷ್ಟಿಯಾಯಿತು.
ಘಟನೆಯಿಂದ ಬೇಸತ್ತ ಪತ್ರಕರ್ತರಿಂದ ಕಾರ್ಯಕ್ರಮ ಬಹಿಷ್ಕಾರಕ್ಕೆ ಯತ್ನಿಸಿದ್ದಾರೆ. ಕಾರ್ಯಕ್ರಮಗಳ ಬಹಿಷ್ಕಾರ ಮಾಡಿ ಹೊರಟಿದ್ದ ಪತ್ರಕರ್ತರನ್ನ ಮನವೊಲಿಸಿದ ಪೊಲೀಸರು. ಬಳಿಕ ರೋಣ ಠಾಣೆಯಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಗುತ್ತಿಗೆದಾರ ಹಣಮಂತಪ್ಪ ಹಟ್ಟಿಮನಿ ವಿರುದ್ಧ ಕ್ರಮಕ್ಕೆ ಪತ್ರಕರ್ತರ ಒತ್ತಾಯಿಸಿದ್ದಾರೆ.
ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರಿಗೆ ಪತ್ರಕರ್ತರು ಮನವಿ ಮಾಡಿದ್ದಾರೆ .