ಕರ್ತವ್ಯಲೋಪ ವ್ಯೆಸಗಿದ ಡಿ ವೈ ಎಸ್ ಪಿ ಮೇಲೆ ಇಲಾಖೆ ವಿಚಾರಣೆಗೆ ಅಸ್ತು: ಧರಣಿ ಸತ್ಯಾಗ್ರಹ ಅಂತೆ
ಸಿಂಧನೂರು: ತಾಲೂಕಿನ ಕುನ್ನಟಗಿ ಗ್ರಾಮದ ದಲಿತ ಜಮದಗ್ನಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕೊಲೆ ಆರೋಪಿಗಳು ಹಾಗೂ ಆರೋಪಿಗಳ ರಕ್ಷಣೆಗೆ ನಿಂತ ಸಿಂಧನೂರು ಡಿವೈಎಸ್ಪಿ ವೆಂಕಟಪ್ಪ ನಾಯಕರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾ 28 ರಿಂದ ದಲಿತಪರ ಸಂಘಟನೆಗಳ ಒಕ್ಕೂಟ ನಗರದ ತಹಶಿಲ್ದಾರ ಕಛೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು ಧರಣಿ ಸತ್ಯಾಗ್ರಹಕ್ಕೆ ಮಣಿದ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಕರ್ತವ್ಯ ಲೋಪ ವ್ಯೆಸಗಿದ ಡಿ ವೈ ಎಸ್ ಪಿ ಮೇಲೆ ಇಲಾಖೆ ವಿಚಾರಣೆ ನೆಡಸಿ ಸೂಕ್ತ ಕ್ರಮ ಕೈಗೊಳ್ಳಗುವದೆಂದು ನೀಡಿದ ಭರವಸೆ ಹಿನ್ನಲೆಯಲ್ಲಿ ನಿನ್ನೆ ವಾಪಾಸ್ ಧರಣಿಯನ್ನು ಹಿಂಪಡೆದುಕೊಂಡರು
ಆರೋಪಿಗಳ ಪರ ಕೆಲಸ ಮಾಡಿದ ಡಿವೈಎಸ್ಪಿ ಮೇಲೆ ಇಲಾಖೆಯ ವಿಚಾರಣೆಗೆ ಜಿಲ್ಲಾ ಪೋಲಿಸ್ ಅಧಿಕಾರಿಗಳು ಇಂದು ಆದೇಶ ಮಾಡಿದ್ದಾರೆ. ವಿಚಾರಣೆಯ ನಂತರ ಶಿಸ್ರಿನ ಕ್ರಮ ಜರುಗಿಸುವ ಪ್ರಕ್ರೀಯೆ ನಡೆಯಲಿದೆ. ಹಾಗೆಯೇ ಕೊಲೆ ಪ್ರಕರಣದ ಆರೋಪ ಪಟ್ಟಿಯಿಂದ ತೆಗೆಯಲ್ಪಟ್ಟ ಲಕ್ಷ್ಮೀಕಾಂತರೆಡ್ಡಿ ಕುನ್ನಟಗಿ, ಹಾಗೂ ಶ್ರೀ ರಮಣರೆಡ್ಡಿ ಸೇರಿದಂತೆ 19 ಜನ ಕೊಲೆ ಆರೋಪಿಗಳ ಮೇಲೆ ಅಪರಾಧ ಸಂಖ್ಯೆ : 0047/2023 u/s IPC 1860 U/S -143,147,148,353,354,504,506,149, SC & ST (pra) ತಿದ್ದುಪಡಿ ಕಾಯ್ದೆ-2015 U/S 3(1)(R)(S),3(2)(VA)ಪ್ರಕರಣ ದಾಖಲಾಗಿದೆ. ಎರಡು ದಿನಗಳ ಪಟ್ಟು ಹಿಡಿದ ಹೋರಾಟದ ಫಲದಿಂದ ಸದರಿ ಆರೋಪಿಗಳ ವಿರುದ್ಧ ಮೇಲಿನ ಪ್ರಕರಣ ದಾಖಲಾಗಿದೆ. ಹಾಗೆಯೆ ಜಮದಗ್ನಿಯ ಕುಟುಂಬಕ್ಕೆ ಸರಕಾರಿ ನೌಕರಿ ಕೊಡುವ ಕಡತವನ್ನು ಇದೇ ವಾರದೊಳಗೆ ಜಿಲ್ಲಾಧಿಕಾರಿ ಕಛೇರಿಯಿಂದ ಪ್ರಾದೇಶಿಕ ಆಯುಕ್ತರ ಕಛೇರಿಗೆ ರವಾನಿಸುವ ಭರವಸೆ ನೀಡಲಾಗಿದೆ ಎನ್ನಲಾಗುತ್ತಿದೆ
ಮುಖಂಡ ಎಂ. ಗಂಗಾಧರ ಮಾತನಾಡಿ
ಈ ಮೂರು ಬೇಡಿಕೆಗಳನ್ನು ನ್ಯಾಯಯುತ ಹಾಗೂ ಕಾನೂನು ಮಾರ್ಗದಲ್ಲಿ ಈಡೇರಿಸಿಕೊಳ್ಳುವಲ್ಲಿ ಈ ಎರಡು ದಿನಗಳ ಹೋರಾಟ ಯಶಸ್ವಿಯಾಗಿದೆ ಎಂದರು
ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ದ.ಸಂಸ (ಸಂಯೋಜಕ) ಜಿಲ್ಲಾ ಸಂಯೋಜಕ ಮಲ್ಲಪ್ಪ ಗೋನಾಳ, ಆರ್ ಸಿಎಫ್ ನ ಆದೇಶ ನಗನೂರು, ಬಸವರಾಜ ಮುದುಗಲ್, ಚಿದಾನಂದ ಲಿಂಗಸೂಗೂರು, ನಾಗರಾಜ ಸಾಸಲಮರಿ, ವೀರಣ್ಣ ಸುಲ್ತಾನಪೂರು, ಅಮೀನಪಾಷಾ ದಿದ್ದಗಿ, ಶೇಖರಪ್ಪ ಗಿಣಿವಾರ, ಎಐಆರ್ ಎಸ್ ಓ ನ ದೇವರಾಜ, ಬೋನ್ ವೆಂಚರ್, ಎಂ.ಬಿ.ದೊಡ್ಡಮನಿ, ಉಮೇಶ ಬಾಲಿ, ಮಲ್ಲಪ್ಪ ಗೋನಾಳ, ಮರಿಯಪ್ಪ ಬಿಎಸ್ ಪಿ, ಬಸವರಾಜ ಕುನ್ನಟಗಿ,ಶ್ರೀಕಾಂತ ಗೋನಾಳ, ಪರುಶುರಾಮ, ಮೈತ್ರಿ, ಪಂಪಾಪತಿ ಬೂದಿವಾಳ, ಕೊಟ್ರೇಶ, ನಾಗಲಿಂಗಪ್ಪ, ರಾಜಶೇಕರ್, ನೂರೊಂದಪ್ಪ, ವಿನೋದಕುಮಾರ, ಹನುಮಂತಪ್ಪ ಮಲ್ಲಾಪೂರ, ಲಿಂಗರಾಜ ಮಲ್ಲಾಪೂರ, ಶ್ಯಾಮಣ್ಣ ಸಾಸಲಮರಿ, ವಿನೋದ ಕುನ್ನಟಗಿ, ರಂಗಪ್ಪ ಪಗಡದಿನ್ನಿ, ಹನುಮಂತ, ಜಮದಗ್ನಿ ಹೆಂಡತಿ ಚನ್ನಮ್ಮ ಕುನ್ನಟಗಿ, ದೇವಮ್ಮ ದರುಗಪ್ಪ, ಅನಪೂರ್ಣ ರಾಮಣ್ಣ, ಪಾರ್ವತೆಮ್ಮ ಹುಲುಗಪ್ಪ, ಸೇರಿದಂತೆ ನೂರಾರು ಜನರು ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಎರೆಡು ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.