ಸಾರ್ವಜನಿಕ ಶೌಚಾಲಯ ಧ್ವಂಸ: ಅಕ್ರಮ ಕಟ್ಟಡ ನಿರ್ಮಾಣ ತೆರವುಗೊಳಿಸಲು ಮನವಿ
ದೇವದುರ್ಗ: ಮಾ.14- ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ 6 ಭಗತ್ ಸಿಂಗ್ ಓಣಿಯ ಮಹಿಳೆಯರ ಸಾರ್ವಜನಿಕ ಶೌಚಾಲಯ ಕಾಂಪೌಡ್ ಧ್ವಂಸಗೊಳಿಸಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿದ್ದಾರೆಂದು ಅಲ್ಲಿನ ನಿವಾಸಿಗಳು ಆರೋಪಿದ್ದಾರೆ.
ಅವರು ಮಂಗಳವಾರದಂದು ಪುರಸಭೆ ಕಛೇರಿಗೆ ಆಗಮಿಸಿದ ವಾರ್ಡಿನ ಮಹಿಳೆಯರು, ಪುರಸಭೆಯ ನಿರ್ಲಕ್ಷ ಹಾಗೂ ಬೇಜವ್ದಾರಿ ಹೇಳಿಕೆಯಿಂದ ತೀವ್ರ ಅಸಮಧಾನಗೊಂಡು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿ ಸರ್ಕಾರ ಸಿರ್ಮಿಸಿದ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ಧ್ವಂಸಗೊಳಿಸಿ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮನೆಗಳ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆಂದು ಎರಡು ತಿಂಗಳುಗಳಿಂದ ತಕರಾರು ದೂರು ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರುವುದಿಲ್ಲ, ಕೂಡಲೇ ಅಕ್ರಮ ಕಟ್ಟಡ ತೆವುಗೊಳಿಸಿ, ಮೊದಲಿನಂತೆ ಕಾಂಪೌಂಡ್ ನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯಲ್ಲಮ್ಮ, ಸಾಬುಗೌಡ, ರೇಣುಕಾ, ಸುನಿತಾ, ಶಮೀನಾ ಭಾನು, ತಿಪ್ಪಯ್ಯ, ಶಿವಪ್ಪ, ಹಾಗೂ ಚಂದ್ರಮ್ಮ, ರಂಗಮ್ಮ ಮುಂತಾದವರು ಭಾಗವಹಿಸಿದ್ದರು.