ಬೆಳಗಾವಿ ದಕ್ಷಿಣ ಮತ್ತು ಉತ್ತರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡುಬೇಕು ಇಲ್ಲದಿದ್ದರೆ, ಬಿಜೆಪಿ ಸ್ಥಾನ ಕೈ ತಪ್ಪುವ ಸಾಧ್ಯತೆ : ಲಿಂಗಾಯತ್ ಸಮಾಜ ಸಭೆ ನಿರ್ಧಾರ
ಚುನಾವಣೆಗೆ ಕೇವಲ 40 ದಿನಗಳು ಉಳಿದಿವೆ ಮತ್ತು ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಬಹಳಷ್ಟು ಜನ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಲಿಂಗಾಯತ ಸಮುದಾಯವು ತಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುವಂತೆ ತೀವ್ರ ಪ್ರಯತ್ನ ನಡೆಸುತ್ತಿದೆ.
ಒಂದೆಡೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂದು ಲಿಂಗಾಯತ ಸಮಾಜದ ಸಭೆ ನಡೆದಿದ್ದು, ಈ ಸಭೆಯಲ್ಲಿ ಲಿಂಗಾಯತ ಸಮುದಾಯದ ವ್ಯಕ್ತಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಕೇಳಿ ಬಂದಿದೆ.
ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಹಾಗಾಗಿ ತಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಪಕ್ಷಕ್ಕೆ ಕೇಳಿಕೊಂಡಿದ್ದಾರೆ.
ಬುಡಾ ಅಧ್ಯಕ್ಷ, ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹುದ್ದೆಯಲ್ಲಿ ಮರಾಠಾ ಸಮುದಾಯದವರಿದ್ದು, ಲಿಂಗಾಯತ ಸಮುದಾಯದಕ್ಕೆ ಮೋಸ ಆಗಿದೆ ಹಾಗಾಗಿ ಲಿಂಗಾಯತ ಅಭ್ಯರ್ಥಿಗೆ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಬೇಕು ಎಂಬ ಆಗ್ರಹವಿದೆ.
ಹೀಗಾಗಿ ಭಾರತೀಯ ಜನತಾ ಪಕ್ಷದಿಂದ ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಿದರೆ, ವೈದ್ಯ ರವಿ ಪಾಟೀಲ್ ಮುಂಚೂಣಿಯಲ್ಲಿದ್ದು, ಗೋಳಪ್ಪ ಹೊಸಮನಿ ಹಾಗು ಮುರುಗೇಂದ್ರಗೌಡ ಪಾಟೀಲ್ ಇವರ ಹೆಸರು ಕೇಳಿ ಬರುತ್ತಿದೆ.
ಡಾ.ರವಿ ಪಾಟೀಲ ಅವರು ಕಳೆದ 15 ವರುಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ಎಲ್ಲ ವರ್ಗದವರಲ್ಲಿ ಹೆಸರುವಾಸಿ ಯಾಗಿದ್ದಾರೆ ಮತ್ತು ಇವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಗುಳಪ್ಪ ಹೊಸಮನಿ ಅವರ ಹೆಸರು ಕೂಡ ಇದೆ. ಮುರುಗೇಂದ್ರಗೌಡ ಪಾಟೀಲ ಅವರು ಈತ್ತಿಚಿಗೆ ಸಮಾಜಮುಖಿ ಕೆಲಸ ಮಾಡಿದ್ದಾರೆ.
ಒಂದು ವೇಳೆ ಲಿಂಗಾಯತ ಅಭ್ಯರ್ಥಿ ಬಿಟ್ಟು ಬೇರೆ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿದರೆ ಸ್ಥಾನ ಕೈತಪ್ಪುವ ಬಿತಿ ಬಿಜೆಪಿ ಪಕ್ಷಕ್ಕೆ ಎದುರಾಗಿದೆ ಎಂದು ಹೇಳಬಹುದು.