ಪ್ರಯತ್ನ ಬೀಡಬೇಡಿ ಟಿಕೆಟ್ ನಲ್ಲಿ ಬದಲಾವಣೆ ಆಗಬಹುದು ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ ಎಂದು ಅನಿಲ್ ಬೆನಕೆ
ದೆಹಲಿ ಹೈಕಮಾಂಡ್ ಮತ್ತು ಬೆಂಗಳೂರ ವರಿಷ್ಠರಿಗೆ ಬೇಟಿಯಾಗಿ ಬೆಳಗಾವಿಗೆ ಆಗಮಿಸಿದ ಅಸಮಾಧಾನ ಅಭ್ಯರ್ಥಿ ಅನಿಲ ಬೆನಕೆ.
ಇಲ್ಲಿಯವರೆಗೆ ಕಷ್ಟ ಪಡದೇ ಎನು ಸಿಕ್ಕಿಲ್ಲ, ಎರಡು ಬಾರಿ ಚುನಾವಣೆಯಲ್ಲಿ ಇದೆ ಪರಿಸ್ಥಿತಿ ಇತ್ತು. ಈ ಬಾರಿಯು ಮತ್ತೆ ನನಗೆ ಟಿಕೆಟ್ ಸಿಗುತ್ತೆ ಎನ್ನುವ ಭರವಸೆ ಇದೆ. ನಾ ಪ್ರಯತ್ನ ಬಿಡುವುದಿಲ್ಲ. ಎರಡು ದಿನದಲ್ಲಿ ಮತ್ತೆ ಬೆಂಗಳೂರಿಗೆ ಹೋಗಿ ವರಿಷ್ಠರ ಮನವೊಲಿಸುವ ಕಾರ್ಯ ಮಾಡುತ್ತೇನೆ. ವರಿಷ್ಠರು ಇಗಾಗಲೇ ಹೇಳಿದ್ದಾರೆ, ನಿಮ್ಮ ಪ್ರಯತ್ನ ಬಿಡಬೇಡಿ ಎಂದು. ನಾನು ನನ್ನ ಪ್ರಯತ್ನ ಬಿಡುವುದಿಲ್ಲ. ಎರಡು ಬಾರಿ ಚುನಾವಣೆಯಲ್ಲಿ ಹಿಗೆ ಆಗಿದೆ ಮತ್ತೆ ನನಗೆ ಟಿಕೆಟ್ ಸಿಕ್ಕಿದೇ. ಈ ಬಾರಿಯು ಮತ್ತೆ ಇನ್ನೊಂದು ಪಟ್ಟಿಯಲ್ಲಿ ನನಗೆ ಟಿಕೆಟ್ ಅನೋನ್ಸ್ ಆಗತ್ತೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರ ಸ್ಟ್ಯಾಂಡಿಂಗ್ ಎಂ.ಎಲ್.ಎ ಅನಿಲ ಬೆನಕೆ ಹೇಳಿದರು.
ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಮಾದ್ಯಮದವರೊಂದಿಗೆ ಮಾತನಾಡಿದರು.
ಸಿಟ್ಟಿಂಗ್ ಎಂ.ಎಲ್.ಎ ಟಿಕೆಟ್ ಕೈ ತಪ್ಪಬಾರದುತ್ತು ಬಿಜೆಪಿ ಪಟ್ಟಿ ಬಿದುಗಡೆಯಲ್ಲಿ ಸಮಸ್ಯೆಯಾಗಿದೆ. ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರುವ ಹಾಗೇ ಪ್ರಯತ್ನ ಮಾಡುತ್ತೇನೆ ಎಂದರು.
ಬೇರೆ ಪಕ್ಷಕ್ಕೆ ಹೋಗುವ ವಿಚಾರ, ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ನನ್ನ ಎಲ್ಲ ಪ್ರಯತ್ನ ಪಲಿಸದಿದ್ದರೆ, ಕೊನೆಯ ಹಂತದಲ್ಲಿ ಟಿಕೆಟ್ ಕೈ ತಪ್ಪಿ ಹೋದರೆ ಬಿಜೆಪಿ ಗೆಲ್ಲಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.