ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಜೆಪಿ ಹೈಕಮಾಂಡ ನನಗೆ ಇಗಾಗಲೇ ಬಿ-ಪಾರ್ಮ್ ಕೊಟ್ಟಿದ್ದೆ, ಏಪ್ರಿಲ್ 17 ರಂದು ನಾನು ನಾಮಿನೇಷನ್ ಮಾಡುತ್ತೇನೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಹೇಳಿದರು.
ಚುನಾವಣೆ ಮುನ್ನವೇ ಬೆಳಗಾವಿ ಉತ್ತರದಲ್ಲಿ ಹೊಸ ಬದಲಾವಣೆಗೆ ಯೋಜನೆ ರೂಪಿಸಿದ : ಡಾ.ರವಿ ಪಾಟೀಲ
ಚುನಾವಣೆ ಮುಂಚೆಯೇ ಬೆಳಗಾವಿ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಿದ್ದೆನೆ. ನಾನು ಒಬ್ಬ ವೈದ್ಯ ಆಗಿರುವುದರಿಂದ ಮೊದಲಿಗೆ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಬೆಳಗಾವಿ ಜನತೆಗೆ ಮೊದಲು ಸುದ್ಧ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಬೆಳಗಾವಿಯನ್ನು ಹೊಸ ಮಾದರಿಯಲ್ಲಿ ರೇಡಿ ಮಾಡುವ ಯೋಜನೆ ಮಾಡಿದ್ದೇನೆ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ ಪ್ರತಿ ನಾಲ್ಕು ವಾರ್ಡ್ ಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯುವ ಮೂಲಕ, ಬೆಳಗಾವಿ ಜನತೆಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಯೋಜನೆ ರೂಪಿಸಿದ್ದೇನೆ. ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡುವ ಮೂಲಕ ಶೈಕ್ಷಣಿಕವಾಗಿ ಬೆಳಗಾವಿಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಬೆಳವಣಿಗೆಗೆ ನಾವು ಶ್ರಮಿಸುತ್ತೇವೆ. ಅಧಿಕಾರಿ ಮುಖ್ಯವಲ್ಲ ಪಕ್ಷ ಮುಖ್ಯ. ಪಕ್ಷಕ್ಕೆ ಹೆಚ್ಚು ಆದ್ಯತೆಯನ್ನು ನೀಡಿ ಪಕ್ಷವನ್ನು ಬೆಳೆಸುವ ಕಾರ್ಯ ಮಾಡುತ್ತೇನೆ ಎಂದು ಡಾ.ರವಿ ಪಾಟೀಲ ಹೇಳಿದರು.